ಬಾಳೆಹಣ್ಣು ಗಂಟಲಲ್ಲಿ ಸಿಕ್ಕಿಕೊಂಡು ಎಲ್ ಕೆಜಿ ವಿದ್ಯಾರ್ಥಿ ಸಾವು
ಚೆನ್ನೈ,
ಡಿ.6: ಅವನಿನ್ನೂ ಮೂರೂವರೆ ವರ್ಷದ ಹಾಲುಗಲ್ಲದ ಕಂದಮ್ಮ. ದುರ್ವಿಧಿ ಅವನನ್ನು ಆಗಲೆ ಯಮಲೋಕಕ್ಕೆ ಕರೆದೊಯ್ದಿದೆ. ಇಲ್ಲಿನ ಪಲ್ಲವರಂ ಸ್ಕೂಲಿನಲ್ಲಿ ಆ ಮಗು ತಿಂಡಿ ತಿನ್ನುವ ವೇಳೆ ಅಮ್ಮ ಕಟ್ಟಿಕೊಟ್ಟಿದ್ದ ಬುತ್ತಿಯಲ್ಲಿದ್ದ ಬಾಳೆಹಣ್ಣನ್ನು ತಿನ್ನುತ್ತಿತ್ತು. ಮುಂದೆ ಅದೇನಾಯಿತೋ ಅದು ಸೀದಾ ಗಂಟಲಿನವರೆಗೂ ಹೋಗಿ ಅಲ್ಲೇ ಸಿಕ್ಕಿಹಾಕಿಕೊಂಡಿತು. ಪಾಪ ಮಗು ಉಸಿರಾಡಲು ಆಗದೆ ಒದ್ಲಾಡಿತು, ಅಷ್ಟೇ. id="toptextpromo">ವಾರದ
ಆರಂಭದ ದಿನ ಸೋಮವಾರ ಸುಮಾರು 10.15ರಲ್ಲಿ ಎಂದಿನಂತೆ ಎಲ್ ಕೆಜಿ 'ಎಚ್' ಸೆಕ್ಷನ್ನಿನ 35 ವಿದ್ಯಾರ್ಥಿಗಳು ತಿಂಡಿ ಡಬ್ಬಿ ತೆರೆದು ಕೂತಾಗ ಈ ದುರ್ಘಟನೆ ನಡೆದಿದೆ. ಹುಡುಗ ಹರೀಶ್ ಸಾಯಿನಾಥನ್ ತನ್ನ ಬಾಕ್ಸಿನಲ್ಲಿದ್ದ ಬಾಳೆಹಣ್ಣನ್ನು ತೆಗೆದು ಒಂದು ಪೀಸನ್ನು ಬಾಯಿಗೆ ತುರುಕಿಕೊಂಡಿದ್ದಾನೆ. ಅದು ಒಂದೇ ಸಲ ಗಂಟಿಲಗೆ ಇಳಿದಿದೆ. id='are-slot-1' class='oiad oi-axt oiadv'> id='top-searched-articles'>ಉಸಿರು
ಬಿಗಿಹಿಡಿದು ನರಳಾಡುತ್ತಿದ್ದ ಮಗುವಿನ ರಕ್ಷಣೆಗೆ ಶಿಕ್ಷಕಿ ಮತ್ತು ಆಯಾ ತಕ್ಷಣ ಧಾಠವಿಸಿದ್ದಾರೆ. ಸಮೀಪದ ಆಸ್ಪತ್ರೆಗೂ ಸಾಗಿಸಿದ್ದಾರೆ. ಆದರೆ ಆ ವೇಳೆಗೆ ಅವನ ಪ್ರಾಣಪಕ್ಷಿ ಹಾರಿಹೋಗಿತ್ತು.











Click it and Unblock the Notifications