ಮೇಡ್ ಇನ್ ಚೈನಾ ಕಪಿಲ್ ಸಿಬಾಲಿಗೆ ಮುಖ-ಭಂಗ

Kapil Sibal
ನವದೆಹಲಿ, ಡಿ.6: ಮೊದಲಿಗೆ ಟಿವಿ ವಾಹಿನಿಗಳಿಗೆ ಸೆನ್ಸಾರ್ ಶಿಪ್ ಬೇಕು ಎಂದು ಪ್ರತಿಪಾದಿಸಿದ್ದ ಕೇಂದ್ರ ಸರ್ಕಾರ ಈಗ ಆನ್ ಲೈನ್ ಮೀಡಿಯಾ, ತಾಣಗಳ ವಿರುದ್ಧ ಬಿಟ್ಟ ಬಾಣ, ತಿರುಗು ಬಾಣವಾಗಿ ಕಪಿಲ್ ಸಿಬಲ್ ಗೆ ಹೊಡೆದಿದೆ.

ಕೇಂದ್ರ ಟೆಲಿಕಾಂ ಸಚಿವ ಕಪಿಲ್ ಸಿಬಲ್ ಅವರ ವಿರುದ್ಧ ಆರಂಭಗೊಂಡ 'Kapil Sibal is an Idiot' ಎಂಬ ಅಭಿಯಾನಕ್ಕೆ ಬೆಲೆ ಸಿಕ್ಕಿದೆ. ಕೆಲವರು ಒಂದು ಹೆಜ್ಜೆ ಮುಂದೆ ಇಟ್ಟು 'Kapil Siban. Or Kapan Sibal. Or Kaptali Siban', ಎಂದು ಕರೆದು ಇದು ಲೋಕಲ್ ತಾಲಿಬಾನ್ ಸಂಸ್ಕೃತಿ ಎಂದು ಹೀಯಾಳಿಸಿದ್ದಾರೆ. ಸಾಮಾಜಿಕ ಜಾಲ ತಾಣ, ಮಾಧ್ಯಮಗಳಲ್ಲಿ ಸೆನ್ಸಾರ್ ಶಿಪ್ ಆಳವಡಿಸಲು ಯತ್ನಿಸಿದ ಯುಪಿಎ ಸರ್ಕಾರ ಆರಂಭದಲ್ಲೇ ಹೊಡೆತ ತಿಂದಿದೆ.

ಟ್ವಿಟ್ಟರ್, ಫೇಸ್ ಬುಕ್, ಬ್ಲಾಗ್ ಗಳಲ್ಲಿ ಕಪಿಲ್ ಸಿಬಲ್ ಮಂಡಿಸಿದ ನೀತಿ ವಿರುದ್ಧ ಅಸಂಖ್ಯಾತ ಪ್ರತಿಕ್ರಿಯೆಗಳು ಹರಿದು ಬಂದಿದೆ. ವಿದೇಶಿ ಮಾಧ್ಯಮಗಳಲ್ಲೂ ಈ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತಿರುವುದನ್ನು ಗಮನಿಸಿ ಸಚಿವ ಸಿಬಲ್ ಈಗ ರಕ್ಷಣಾತ್ಮಕ ತಂತ್ರಕ್ಕೆ ಮೊರೆ ಹೋಗಿದ್ದಾರೆ.

'ಆನ್ ಲೈನ್ ಮೀಡಿಯಾ, ತಾಣ ಗಳಿಗೆ ಸೆನ್ಸಾರ್ ಬೇಕು ಎಂದು ಹೇಳಲಿಲ್ಲ. ಉದ್ರೇಕಕಾರಿ ಲೇಖನಗಳಿಗೆ ಕಡಿವಾಣ ಹಾಕುವುದು ನಮ್ಮ ಉದ್ದೇಶ' ಎಂದು ಹೇಳಿದ್ದಾರೆ.

ಫೇಸ್ ಬುಕ್ ಭರವಸೆ: ಗೂಗಲ್, ಮೈಕ್ರೋಸಾಫ್ಟ್, ಯಾಹೂ ಹಾಗೂ ಫೇಸ್ ಬುಕ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಮಹತ್ವದ ಸಭೆ ನಡೆಸಿ ಚರ್ಚೆ ನಡೆಸಿದ ನಂತರ ಸಚಿವ ಸಿಬಲ್ ಮೇಲ್ಕಂಡ ರೀತಿ ಹೇಳಿಕೆ ನೀಡಿದ್ದಾರೆ.

ಸರ್ಕಾರದ ನೀತಿಯನ್ನು ನಾವು ಬೆಂಬಲಿಸುತ್ತೇವೆ. ಯಾವುದೇ ಬಳಕೆದಾರರ ವಿರುದ್ಧ ಅವಹೇಳನಕಾರಿ ಹೇಳಿಕೆ, ಚಿತ್ರ ಅಥವಾ ವಿಡಿಯೋ ಗಳಿದ್ದರೆ ಅದನ್ನು ತೆಗೆದು ಹಾಕಲಾಗುವುದು ಹಾಗೂ ತೀವ್ರವಾದ ಎಚ್ಚರಿಕೆ ನೀಡಲಾಗುವುದು ಎಂದು ಫೇಸ್ ಬುಕ್ ಸಂಸ್ಥೆ ವಕ್ತಾರರು ಹೇಳಿದ್ದಾರೆ.

ಸಿರಿಯಾದಲ್ಲಿ ಐಫೋನ್ ಬ್ಯಾನ್ ಆದಂತೆ, ಜರ್ಮನಿಯಲ್ಲಿ ಫೇಸ್ ಬುಕ್ ನಿಷೇಧದಂತೆ, ಚೀನಾ ಅನೇಕ ವೆಬ್ ತಾಣಕ್ಕೆ ಕಡಿವಾಣ ಹಾಕಿದಂತೆ ಭಾರತದಲ್ಲೂ ಕಾನೂನು ತರಲು ಯತ್ನಿಸಿದ ಯುಪಿಎ ಸರ್ಕಾರಕ್ಕೆ ಮುಖಭಂಗ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+