ಅಶೋಕ್ vs ಎಂಸಿ ನಾಣಯ್ಯ ಗೆದ್ದವರು ಯಾರಯ್ಯ?

ಗೃಹ ಸಚಿವ ಆರ್. ಅಶೋಕ್ಹಾಗೂ ವಸತಿ ಸಚಿವ ವಿ. ಸೋಮಣ್ಣ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿರುವುದು. ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿರುದ್ಧ ದೂರು ದಾಖಲಾಗಿರುವುದನ್ನು ವಿಪಕ್ಷದ ನಾಯಕರು ಪ್ರಮುಖ ಅಸ್ತ್ರವಾಗಿ ಬಳಸಿಕೊಂಡರು.
ಸಚಿವ ಅಶೋಕ್ ಹಾಗೂ ಸೋಮಣ್ಣ ವಿರುದ್ಧ ಕಿಡಿಕಾರಿದ ಜೆಡಿಎಸ್ ನಾಯಕರು, ಕಳಂಕಿತರು ಸದನದ ಒಳಗೆ ಪ್ರವೇಶಿಸಿದಂತೆ ತಡೆದರು. ಈ ಮಧ್ಯೆ ವೇಳೆ ಜೆಡಿಎಸ್ ನಾಯಕ ಎಂ.ಸಿ ನಾಣಯ್ಯ ಹಾಗೂ ಅಶೋಕ್ ನಡುವೆ ತೀವ್ರವಾದ ಮಾತಿನ ಚಕಮಕಿ ನಡೆಯಿತು.
ಸದನದ ಪ್ರಶ್ನೆಗೆ ಉತ್ತರಿಸುವ ನೈತಿಕ ಹಕ್ಕು ಕಳಂಕಿತ ಸಚಿವರಿಗೆ ಇಲ್ಲ ಎಂದು ನಾಣಯ್ಯ ವಾದಿಸಿದರು. ನಾಣಯ್ಯ ಅವರ ವಕೀಲಿಕೆಗೆ ತಲೆಬಾಗಿದ ಅಶೋಕ್ ಕೆಲಕಾಲ ಉತ್ತರಿಸಲು ಪದಗಳು ಸಿಗದೇ ತಡಕಾಡಿದರು.
ಚರ್ಚೆಯಾಗಬಲ್ಲ ವಿಷಯಗಳು: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಲೋಕಾಯುಕ್ತ ವರದಿ, ಲೋಕಾಯುಕ್ತ ಅಧಿಕಾರಿಗಳ ಎತ್ತಂಗಡಿ, ನೂತನ ಲೋಕಾಯುಕ್ತರ ಆಯ್ಕೆ, ಬಳ್ಳಾರಿ ಉಪ ಚುನಾವಣೆ, ವಿದ್ಯುತ್ ಸಮಸ್ಯೆ, ಕೃಷಿ ಬಂಡವಾಳ ಹೂಡಿಕೆ ಸಮಾವೇಶ, ಸ್ಪೀಕರ್ ಕೆಜಿ ಬೋಪಯ್ಯ ವಿರುದ್ಧ ಕಾಂಗ್ರೆಸ್ ಮಂಡಿಸಿರುವ ಅವಿಶ್ವಾಸ ನಿರ್ಣಯ, ಬಿಬಿಎಂಪಿ ಹಗರಣ ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚೆ, ಗದ್ದಲ, ವಾಕ್ ಪ್ರಹಾರ, ಯುದ್ಧ, ಜಟಾಪಟಿ ನಡೆಯಲಿದೆ.
ಇದೆಲ್ಲರ ಜೊತೆಗೆ ನಾಗರೀಕ ಸನ್ನಸು ವಿಧೇಯಕ, ಕರ್ನಾಟಕ ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ, ಕರ್ನಾಟಕ ಅನುಸೂಚಿತ ಜಾತಿ, ಬುಡಕಟ್ಟು ಹಾಗೂ ಹಿಂದುಳಿದ ಜನಾಂಗ ನೇಮಕಾತಿ ಮತ್ತು ಮೀಸಲಾತಿ ವಿಧೇಯಕ, ಜಲ್ಲಿ ಕ್ರಷರ್ ವಿಧೇಯಕ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ತಿದ್ದುಪಡಿ ವಿಧೇಯಕ..ಇತ್ಯಾದಿ ವಿಧೇಯಕಗಳು ಮಂಡನೆಯಾಗಿ, ಚರ್ಚೆ ನಡೆದು, ಜಾರಿಗೊಳ್ಳಲಿದೆ ಎಂಬ ಭರವಸೆಯನ್ನು ಶ್ರೀಸಾಮಾನ್ಯರು ಇಟ್ಟುಕೊಳ್ಳಲು ಅಡ್ದಿಯಿಲ್ಲ.












Click it and Unblock the Notifications