ಮೊದಲ ದಿನವೇ ಶ್ರೀರಾಮುಲು ಅಸೆಂಬ್ಲಿಗೆ ಚಕ್ಕರ್

ಮುಖ್ಯಮಂತ್ರಿಯಾಗಿ ಸದಾನಂದ ಗೌಡರಿಗೆ, ಮಾಜಿ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರಿಗೆ ಹಾಗೂ ಪಕ್ಷೇತರ ಶಾಸಕರಾಗಿ ಶ್ರೀರಾಮುಲು ಅವರಿಗೆ ಇದು ಮೊದಲ ಅಧಿವೇಶನವಾಗಿದೆ.
ಆದರೆ, ಮೊದಲ ದಿನವೇ ಬಳ್ಳಾರಿ ಪಕ್ಷೇತರ ಶಾಸಕ ಶ್ರೀರಾಮುಲು ಮತ್ತು ಅವರ ಆಪ್ತ ಶಾಸಕರಾದ ಸುರೇಶ್ ಬಾಬು, ನಾಗೇಂದ್ರ, ನೇಮಿರಾಜ್, ಸೋಮಶೇಖರ ರೆಡ್ಡಿ ಅವರು ಅಧಿವೇಶನಕ್ಕೆ ಚಕ್ಕರ್ ಹಾಕಿದ್ದು ವಿಶೇಷ. ಹೊಸಪೇಟೆ ಶಾಸಕ ಆನಂದ್ ಸಿಂಗ್ ಮಾತ್ರ ಹಾಜರಾಗಿದ್ದರು.
ಶ್ರೀರಾಮುಲು ಎಲ್ಲಿ?: ಆತ್ಮೀಯ ಗೆಳೆಯ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರನ್ನು ಭೇಟಿ ಮಾಡಲು ಬಳ್ಳಾರಿ ಗ್ರಾಮಾಂತರ ನೂತನ ಶಾಸಕ ಶ್ರೀರಾಮುಲು ಸೋಮವಾರ ತೆರಳಲಿದ್ದಾರೆ ಎಂಬ ಸುದ್ದಿಯಿದೆ.
ಪ್ರಮಾಣ ವಚನ ಯಾವಾಗ?: ಡಿ.7 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದೇನೆ. ಬೆಂಗಳೂರಿನ ನನ್ನ ನಿವಾಸ ಪಾರಿಜಾತದಿಂದ ವಿಧಾನಸೌದವರೆಗೆ ಪಾದಯಾತ್ರೆ ಮಾಡುತ್ತೇನೆ. ನಂತರ ಅಂಬೇಡ್ಕರ್, ಬಸವಣ್ಣ, ಗಾಂಧೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡುತ್ತೇನೆ ಆಮೇಲೆ ಪ್ರಮಾನ ವಚನ ಎಂದು ಶ್ರೀರಾಮುಲು ಹೇಳಿದ್ದಾರೆ.
ಮೊದಲ ದಿನದ ವಿಶೇಷ: ಆರ್ ಆಶೋಕ್ vs ನಾಣಯ್ಯ ಜಟಾಪಟಿ ಮುಂದಿದೆ...












Click it and Unblock the Notifications