25 ಕೋಟಿ ರೂ ಲಂಚಶೂರ ಇನ್ಸ್‌ಪೆಕ್ಟರ್ ಬಂಧನ
ಮುಂಬಯಿ,
ಡಿ. 4: ಇಲ್ಲಿನ ಬಜಾರ್ ಪೇಟೆ ಪೊಲೀಸ್ ಠಾಣೆಯ 25 ಕೋಟಿ ಲಂಚಕೋರ ಇನ್ಸ್‌ಪೆಕ್ಟರ್ ಸಿ. ಎಸ್. ಮಳಿ ಲಂಚಕ್ಕೆ ಕೈಯೊಡ್ಡಿದ್ದಾಗ ರೆಡ್ ಹ್ಯಾಂಡ್ ಆಗಿ ಭ್ರಷ್ಟಾಚಾರ ವಿರೋಧಿ ದಳದ (ಎಸಿಬಿ) ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ತದನಂತರ, ಎಸಿಬಿ ಪೊಲೀಸರು ಮಳಿ ನಿವಾಸದ ಮೇಲೆ ದಾಳಿ ನಡೆಸಿದಾಗ ಮಳಿ 25 ಕೋಟಿ ರುಪಾಯಿ ಅಕ್ರಮ ಆಸ್ತಿ ಸಂಪಾದಿಸಿರುವ ಬಗ್ಗೆ ದಾಖಲೆಗಳು ಸಿಕ್ಕಿವೆ. id="toptextpromo">ರಾಜು
ರಾಠಿಲಾಲ್ ಸೋಮಾ ಎಂಬುವವರಿಂದ ಮಳಿ ಶುಕ್ರವಾರ 60,000 ರುಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಥಾಣೆಯ ಎಸಿಬಿ ಘಟಕದ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಕುಇತೂಹಲದ ಸಂಗತಿಯೆಂದರೆ ಪುಣ್ಯಾತ್ಮ ಮಳಿ ಇಷ್ಟೊಂದು ಅಕಗ್ರಮ ಆಸ್ತಿಯನ್ನು ರಕ್ಷಿಸಿಕೊಳ್ಳುವ ಸಲುವಾಗಿ ಎರಡು ಗನ್ನುಗಳನ್ನೂ ಹೊಂದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮುಂಬೈನ
ಕಲ್ಯಾಣ್ ರೈಲ್ವೆ ನಿಲ್ದಾಣದ ಬಳಿಯಿರುವ ಆರ್ಚಿಸ್ ಅಪಾರ್ಟಮೆಂಟಿನಲ್ಲಿ 2.5 ಕೋಟಿ ರೂ. ಮೌಲ್ಯದ 5 ಫ್ಲಾಟುಗಳು ಮತ್ತು ಎರಡು ವಾಣಿಜ್ಯ ಅಂಗಡಿಗಳನ್ನು ಹೊಂದಿದ್ದಾರೆ. ಜತೆಗೆ ಮಾಹಾನಗರದ ಇತರೆಡೆ ಇನ್ನೂ ಹಲವು ನಿವಾಸಗಳನ್ನು ಹೊಂದಿದ್ದಾರೆ. ಸೋಲಾಪುರದಲ್ಲಿ 16 ಕೋಟಿ ಮೌಲ್ಯದ 80 ಎಕರೆ ಜಮೀನು ಹೊಂದಿದ್ದಾರೆ.











Click it and Unblock the Notifications