ಶ್ರೀರಾಮುಲು ಗೆದ್ದಿದ್ದಕ್ಕೆ ಸಕತ್ ಖುಷಿಪಟ್ಟ ದೇವೇಗೌಡ್ರು

ನಗರದ ನಾರಾಯಣ ಆಯುರ್ವೇದ ಕೇಂದ್ರ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ದೇವೇಗೌಡರು ಬಳ್ಳಾರಿ ಚುನಾವಣಾ ಫಲಿತಾಂಶದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಶ್ರೀರಾಮುಲು ಅವರ ಜಯ ಜನತೆ ಅವರಿಗೆ ನೀಡಿದ ತೀರ್ಪು. ಕೊಪ್ಪಳ ಉಪ ಚುನಾವಣೆಯಲ್ಲಿ ಜೆಡಿಎಸ್ ಗೆ ಆದ ಕಹಿ ಅನುಭವದ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಯಾವುದೇ ಅಭ್ಯರ್ಥಿಯನ್ನು ನಿಲ್ಲಿಸಲಿಲ್ಲ.
ಶ್ರೀರಾಮುಲು ಅವರಿಗೆ ಬೆಂಬಲ ನೀಡಿದ ವಿಷಯ ಅದು ಪಕ್ಷದ ರಾಜ್ಯಾಧ್ಯಕ್ಷ(ಎಚ್ ಡಿ ಕುಮಾರಸ್ವಾಮಿ) ಹಾಗೂ ಕಾರ್ಯಕರ್ತರ ನಿರ್ಣಯ. ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಪಕ್ಷ ರಾಜ್ಯಾದ್ಯಂತ ಹೋರಾಟ ಮುಂದುವರೆಸುತ್ತದೆ ಎಂದು ದೇವೇಗೌಡರು ಹೇಳಿದರು.












Click it and Unblock the Notifications