ಬೆಂಗಳೂರಿನಲ್ಲಿ ಡಿ.4 ಭಾನುವಾರ ಸ್ಲಟ್ ವಾಕ್

Slutwalk in Bangalore on December 4
ಬೆಂಗಳೂರು, ಡಿ. 3 : ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ, ತಾರತಮ್ಯವನ್ನು ವಿರೋಧಿಸಿ ಆಧುನೀಕರಣದ ಗಾಳಿಗೆ ತೆರೆದುಕೊಂಡಿರುವ ಬೆಂಗಳೂರಿನ ಮಹಿಳೆಯರು ನಗರದಲ್ಲಿ ಡಿ.4ರಂದು ಬೆಳಿಗ್ಗೆ 10.30 ಗಂಟೆಗೆ ಸ್ಲಟ್ ವಾಕ್ 'ಗೆಜ್ಜೆ ಹೆಜ್ಜೆ'ಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸ್ಲಟ್ ವಾಕ್ ಎಂಬುದು ಅಮೆರಿಕಾದಲ್ಲಿ ಮಹಿಳಾ ದೌರ್ಜನ್ಯದ ವಿರುದ್ಧ ಹುಟ್ಟಿಕೊಂಡಂಥ ಚಳವಳಿ (ಓದಿ : ಸ್ಲಟ್ ವಾಕ್ ಎಂದರೇನು?). ಭಾರತದಲ್ಲಿಯೂ ದೆಹಲಿ ಮತ್ತು ಮುಂಬೈಗಳಲ್ಲಿ ಇಂಥಹ ಸ್ಲಟ್ ವಾಕ್ ಗಳು ನಡೆದಿವೆ. ಈಗ ಈ ಸ್ಲಟ್ ವಾಕ್ ಬೆಂಗಳೂರಿಗೂ ಬಂದು ವಕ್ಕರಿಸಿಕೊಂಡಿದೆ.

ಈ ಚಳವಳಿಯನ್ನು ಬೆಂಬಲಿಸುವ ಯುವತಿ ಮತ್ತು ಯವಕರು ಟೌನ್ ಹಾಲ್ ಎದಿರು ಬೆಳಿಗ್ಗೆ 10.30ಕ್ಕೆ ಸೇರಲಿದ್ದಾರೆ. ಅಲ್ಲಿಂದ ಸ್ಲಟ್ ವಾಕ್ ಪ್ರಾರಂಭವಾಗಿ ಫ್ರೀಡಂ ಪಾರ್ಕ್ ವರೆಗೆ ಸ್ವಾತಂತ್ರ್ಯ ಬಯಸುವವರು ವಾಕ್ ಮಾಡಲಿದ್ದಾರೆ. ಮಹಿಳೆಯರು ಸ್ವತಂತ್ರರು, ತಮಗೆ ಕಂಫರ್ಟ್ ಎನಿಸುವ ಬಟ್ಟೆ ಧರಿಸಬಹುದು. ವಿಚಿತ್ರವಾಗಿರುವ, ಬಣ್ಣಬಣ್ಣದ, ಕಾಮೋತ್ತೇಜಕ ಬಟ್ಟೆ ಧರಿಸಿ ಬಂದರಂತೂ ಸ್ವಾಗತ ಸುಸ್ವಾಗತ ಎಂದು ಆಯೋಜಕರು ಕರೆ ನೀಡಿದ್ದಾರೆ.

ಇದಕ್ಕೆ ನೊಂದಾವಣಿ ಮಣ್ಣುಮಸಿ ಯಾವುದೂ ಇರುವುದಿಲ್ಲ. ಯಾರು ಬೇಕಾದರೂ ಬರಬಹುದು. 'ಬದಲಾಯಿಸಬೇಕಾಗಿರುವುದು ನಾವು ಧರಿಸುವ ಬಟ್ಟೆಯಲ್ಲ, ನಾವು ಮಹಿಳೆಯರನ್ನು ನೋಡುವ ದೃಷ್ಟಿಕೋನ' ಎಂಬುದು ಈ ಅಭಿಯಾನದ ಮೂಲ ಉದ್ದೇಶ. ಫುಲ್ ಪೊಲೀಸ್ ಬಂದೋಬಸ್ತ್ ಇರುತ್ತದೆ, ನಿರ್ಭೀತರಾಗಿ ಬನ್ನಿ, ಬಿಂದಾಸ್ ಆಗಿ ಬನ್ನಿ ಎಂದು ಕರೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+