ಕುಕ್ಕೆ ಸುಬ್ರಮಣ್ಯ: ದಲಿತರ ಮೇಲೆ ಹಲ್ಲೆಗೈದವರ ಬಂಧನ

ರಾಜ್ಯ ಹಿಂದುಳಿದ ವರ್ಗಗಳ ಜಾಗೃತಾ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ಸೇರಿದಂತೆ ಐವರ ಮೇಲೆ ದೇವಸ್ಥಾನದ ಸಿಬ್ಬಂದಿ ಹಾಗೂ ಅನಾದಿ ಕಾಲದಿಂದಲೂ ಮಡೆಸ್ನಾನ ಮಾಡಿಕೊಂಡು ಬಂದಿರುವ ಮಲೆಕುಡಿಯರು ಬುಧವಾರ(ನ.30) ಹಲ್ಲೆ ನಡೆಸಿದ್ದರು.
ದಲಿತ ಮುಖಂಡರ ಹಲ್ಲೆ ಖಂಡಿಸಿ, ಮೈಸೂರು, ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರಗತಿಪರದಿಂದ ತೀವ್ರ ಪ್ರತಿಭಟನೆ ವ್ಯಕ್ತವಾಗಿತ್ತು.
ಈ ಬಾರಿ ಮಡೆಸ್ನಾನ ಅಥವಾ ಎಂಜೆಲೆಲೆ ಮೇಲೆ ಉರುಳುವ ಪದ್ಧತಿಗೆ ಜಿಲ್ಲಾಡಳಿತ ನಿಷೇಧ ಹೇರಿತ್ತು. ಆದರೆ, ಭಕ್ತಾದಿಗಳು, ಮಲೆಕುಡಿಯರ ಒತ್ತಾಯದ ಮೇರೆಗೆ ನಿಷೇಧವನ್ನು ಹಿಂಪಡೆಯ ಬೇಕಾಯಿತು ಎಂದು ದೇವಳದ ಆಡಳಿತಾಧಿಕಾರಿ ಸುಂದರಭಟ್ ಹಾಗೂ ಕಾರ್ಯನಿರ್ವಹಣಾಧಿಕಾರಿ ಎಚ್‌ಎಂ ಕಾಳಿ ಅವರು ಹೇಳಿದ್ದರು.
ದೇವಳದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಜಿಲ್ಲಾಡಳಿತದಿಂದ ಮಾಹಿತಿ ಪಡೆದು ಹೆಚ್ಚಿನ ತನಿಖೆ ನಡೆಸುವುದಾಗಿ ಕುಕ್ಕೆ ಠಾಣೆ ಪೊಲೀಸರು ಹೇಳಿದ್ದಾರೆ.












Click it and Unblock the Notifications