ಯಃಕಶ್ಚಿತ್ ಇಲಿಗಾಗಿ ಮನೆಯನ್ನೇ ಕೆಡವಿದ ದಂಪತಿ!

42 ವರ್ಷದ ಮಾಜಿ ಸೈನಿಕ ಗ್ಯಾರಿ ಟೇಲರ್ ಮತ್ತು 38 ವರ್ಷದ ಲಿಯಾನ್ ಫೆ ದಂಪತಿ ಯಃಕಶ್ಚಿತ್ ಇಲಿಯ ಮೇಲೆ ನಡೆಸಿದ ಘೋರ ಯುದ್ಧದ ಪ್ರಸಂಗವಿದು. ಆದರೆ ಕುಡಿದ ಮತ್ತಿನಲ್ಲಿದ್ದ ಟೇಲರ್ ತನ್ನ ಪತ್ನಿಯ ಜತೆಗೂಡಿ ಇಂತಹ ಕೆಲಸಕ್ಕೆ ಕೈಹಾಕಿದ್ದಾರೆ. ಅದೂ ಬಾಡಿಗೆ ಮನೆಯಲ್ಲಿ. ದಂಪತಿಯ ಇಲಿ ನಿರ್ನಾಮ ಕಾರ್ಯಾಚರಣೆಯಿಂದಾಗಿ £5,500 ನಷ್ಟು ಭಾರಿ ನಷ್ಟವಾಗಿದೆ.
ಸೆಲ್ಲರ್ ನಲ್ಲಿ ನನಗೆ ಇಲಿ ಕಾಣಿಸಿತು ಎಂದು ಪ್ರೀತಿಯ ಪತ್ನಿ ಹೇಳುತ್ತಿದ್ದಂತೆ ಟೇಲರ್ ಸೆಲ್ಲರ್ ಕಾಂಕ್ರೀಟ್ ಅನ್ನೂ ಕೆಡವಿ ಹಾಕಿದ್ದಾರೆ. ಇಲಿ ಶೋಧದಲ್ಲಿ ಮನೆಯಲ್ಲಿನ ಅಟ್ಟ ಕೆಡವಿ, ಕಪ್ ಬೋರ್ಡುಗಳನ್ನು ಬೀಳಿಸಿ ಏನೆಲ್ಲ ರಾದ್ಧಾಂತ ಮಾಡಿದ್ದಾರೆ ಅಂದರೆ ಮನೆಯ ಮಾಲೀಕರು ಕೂಲಾಗಿ ಈಗ ಕೋರ್ಟ್ ಕಟೆಕಟೆ ಹತ್ತಿದ್ದಾರೆ.
ಇದೊಂದು ಅಪರೂಪದ ಪ್ರಕರಣ ಎಂದಿರುವ ನ್ಯಾಯಾಲಯ ದಂಪತಿಗೆ 3 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಹೋಗ್ಲಿ ಇಷ್ಟಕ್ಕೂ ಇಲಿ ಸಿಕ್ತಾ ಅಂದರೆ ಉಹೂ ಖಂಡಿತಾ ಅದು ಈ ದಂಪತಿಯ ಕೈಗೆ ಸಿಕ್ಕಿಲ್ಲ!












Click it and Unblock the Notifications