2ಜಿ ಹಗರಣ: ಜಾಮೀನು ಬೇಡದ ರಾಜಾ ನಡೆ ನಿಗೂಢ

2g-scam-raja-may-not-to-go-for-bail
ನವದೆಹಲಿ, ಡಿ.1: 2ಜಿ ಹಗರಣದಲ್ಲಿ ಒಬ್ಬೊಬ್ಬರಾಗಿ ಜೈಲಿನಿಂದ ಹೊರಬರುತ್ತಿದ್ದಾರೆ. ಆದರೆ ಹಗರಣದ ಸೂತ್ರಧಾರ ಎಂದೇ ಬಿಂಬಿತವಾಗಿರುವ ಡಿಎಂಕೆ ಸಂಸದ ಎ. ರಾಜಾ ಮಾತ್ರ ತಿಹಾರ ಜೈಲೇ ವಾಸಿ ಎಂದು ನಿಶ್ಚಿಂತೆಯಿಂದ ಇದ್ದಾರೆ.

ಕನ್ನಿಮೋಳಿ ಮೊನ್ನೆ ಜೈಲಿನಿಂದ ಹೊರಬರುತ್ತಿದ್ದಂತೆ ರಾಜಾ ಸಹ ಜಾಮೀನಿಗೆ ಅರ್ಜಿ ಗುಜರಾಯಿಸುತ್ತಾರೆ ಅಂದುಕೊಡಿದ್ದೇ ಬಂತು ಆದರೆ ಅವರು ಮಾತ್ರ ಮಗುಮ್ಮಾಗಿಯೇ ಇದ್ದಾರೆ. ಜತೆಗೆ ಆರಂಭದಿಂದಲೂ ತಮ್ಮ ಪರ ಕೋರ್ಟಿನಲ್ಲಿ ವಾದಿಸಲು ವಕೀಲರನ್ನೂ ನೇಮಕ ಮಾಡಿಕೊಳ್ಳದೆ ಸ್ವತಃ ವಾದ ಮಂಡಿಸುತ್ತಿದ್ದಾರೆ.

ಈ ಮಧ್ಯೆ, ಫೆಬ್ರವರಿ 2ರಂದು ರಾಜಾ ಜತೆ ಬಂಧನಕ್ಕೊಳಗಾದ ಮಾಜಿ ಟೆಲಿಕಾಂ ಕಾರ್ಯದರ್ಶಿ ಸಿದ್ಧಾರ್ಥ ಬೇವೂರ ಅವರ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟಿನಲ್ಲಿ ಇಂದು (ಡಿ.1) ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.

ಆದರೆ ರಾಜಾ, ಸಿದ್ಧಾರ್ಥ ಬೇವೂರ ಮತ್ತು ಆರ್.ಕೆ. ಚಾಂಡೋಲಿಯಾ ತ್ರಿಮೂರ್ತಿಗಳು ಹಗರಣದ ಸೂತ್ರಧಾರರು ಎಂಬುದು ಸಿಬಿಐ ವಾದವಾಗಿದ್ದು, ಈ ಮೂವರಿಗೂ ಜಾಮೀನು ನೀಡುವುದು ಬೇಡವೇ ಬೇಡ ಎನ್ನುತ್ತಿದೆ.

ಹೀಗೆಂದ ಮಾತ್ರಕ್ಕೆ 'ಎಲ್ಲವೂ ಮುಗಿಯಿತು. ತನಗೆ ಶಿಕ್ಷೆ ಗ್ಯಾರಂಟಿ. ಆದ್ದರಿಂದ ಜಾಮೀನು ಕೋರುವುದು ವ್ಯರ್ಥ' ಎಂದು ರಾಜಾ ಏನೂ ಯೋಚಿಸುತ್ತಿಲ್ಲ. ಸ್ವತಃ ವಕೀಲರಾದ ರಾಜಾ ಕಾನೂನನ್ನು ಅಧ್ಯಯಿಸುತ್ತಿದ್ದು, ಎಲ್ಲ ಅವಕಾಶಗಳನ್ನು ಮುಕ್ತವಾಗಿಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+