ಶಂಕರ್ ಬಿದರಿ ರಾಜ್ಯದ ನೂತನ ಡಿಜಿ ಐಜಿಪಿ

ಡಿಜಿ ಐಜಿಪಿ ಸ್ಥಾನಕ್ಕೆ ಗೃಹರಕ್ಷಕ ದಳದ ಡಿಜಿಪಿ ಎ.ಆರ್. ಇನ್ಫೆಂಟ್ ಹಾಗೂ ಸಿಐಡಿ ಡಿಜಿಪಿ ಶಂಕರ್ ಬಿದರಿ ನಡುವೆ ಭಾರಿ ಪೈಪೋಟಿ ನಡೆದಿತ್ತು. ಜೊತೆಗೆ ಡಿಜಿಪಿ ಸುಶಾಂತ್ ಮಹಾಪತ್ರ ಹೆಸರು ಚಾಲ್ತಿಯಲ್ಲಿತ್ತು. ಅದರೆ, ಅಂತಿಮವಾಗಿ ಶಂಕರ್ ಬಿದರಿ ಅವರನ್ನು ಆಯ್ಕೆ ಮಾಡಲಾಗಿದೆ.
ಸೇವಾ ಹಿರಿತನ ಮತ್ತು ಉತ್ತಮ ಸೇವಾ ದಾಖಲೆಗಳ ಆಧಾರದ ಮೇಲೆ ಮೂವರು ಅಧಿಕಾರಿಗಳ ಪಟ್ಟಿಯನ್ನು ಯುಪಿಎಸ್‌ಸಿ ಸಿದ್ಧಪಡಿಸಿ, ರಾಜ್ಯ ಸರ್ಕಾರಕ್ಕೆ ಕಳುಹಿಸಿತ್ತು. ಇದರಂತೆ ಶಂಕರ್ ಬಿದರಿ ಅವರ ಆಯ್ಕೆ ಮಾಡಲಾಗಿದೆ.
ನೂತನ ಮಹಾ ನಿರ್ದೇಶಕ ಶಂಕರ್ ಬಿದರಿ ಅವರ ಅಧಿಕಾರ ಅವಧಿ2012ರ ಮೇ ತಿಂಗಳಿಗೆ ಮುಗಿಯಲಿದೆ. ಎ.ಆರ್. ಇನ್ಫೆಂಟ್ ಅವರ ಹೆಸರನ್ನು ಆರೆಸ್ಸೆಸ್ ಮುಖಂಡರು ಮುಖ್ಯಮಂತ್ರಿ ಡಿವಿ ಸದಾನಂದ ಗೌಡರಿಗೆ ಸೂಚಿಸಿದ್ದರು ಎಂಬ ಸುದ್ದಿ ಕೂಡಾ ಹರಡಿತ್ತು.












Click it and Unblock the Notifications