ಬಳ್ಳಾರಿ ಸಮರ: ಶ್ರೀರಾಮುಲುಗೆ ಇಲ್ಲ ಮತ ಚಲಾವಣೆ ಭಾಗ್ಯ!

ಏಕೆಂದರೆ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಸುಮಾರು 2 ಸಾವಿರದಷ್ಟು ಅಧಿಕವಾಗಿದೆ. ಕ್ಷೇತ್ರದಲ್ಲಿ ಪುರುಷ ಮತದಾರರು 85 ಸಾವಿರ ಮತ್ತು 86 ಸಾವಿರಕ್ಕೂ ಹೆಚ್ಚು ಮಹಿಳಾ ಮತದಾರರು ಮತ ಚಲಾಯಿಸಲಿದ್ದಾರೆ. ಮತದಾನ ಬೆಳಗ್ಗೆ 8 ಗಂಟೆಗೆ ಆರಂಭವಾಗಿದ್ದು ಸಂಜೆ 5 ಗಂಟೆಗೆ ಮುಕ್ತಾಯವಾಗಲಿದೆ. ಜಿಲ್ಲೆಯಾದ್ಯಂತ ಬಿಗಿ ಭದ್ರತೆ ಮಾಡಲಾಗಿದೆ.
ಬಿಜೆಪಿ, ಕಾಂಗ್ರೆಸ್ ಮತ್ತು ಕ್ಷೇತ್ರದ ಈ ಹಿಂದಿನ ಶಾಸಕ ಶ್ರೀರಾಮುಲು ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಗೆಲುವು ಯಾರದೇ ಆದರೂ ಗರಿಷ್ಠ 5 ಸಾವಿರ ಮತಗಳ ಅಂತರದಲ್ಲಿ ಜಯ ದಕ್ಕಿಸಕೊಳ್ಳಬಹುದಾಗಿದೆ. ಅಭ್ಯರ್ಥಿಗಳದೂ ಅದೇ ಚಿಂತೆಯಾಗಿದೆ. ಸದ್ಯ ಹೇಗೋ ಗೆದ್ದರಾಯಿತಪ್ಪಾ ಎಂಬ ಮನೋಭಾವ ಹೊಂದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಯೂ ಮತ ಹಕ್ಕು ವಂಚಿತ: ಕುತೂಹಲದ ಸಂಗತಿಯೆಂದರೆ ಉಪಚುನಾವಣೆಗೆ ಕಾರಣೀಭೂತರಾದ ಬಿ. ಶ್ರೀರಾಮುಲು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೂ ಸ್ವತಃ ಅವರೇ ಮತ ಚಲಾಯಿಸಿಲ್ಲ. ಕಾನೂನುರೀತ್ಯ ಇದಕ್ಕೆ ಅವಕಾಶ ಇಲ್ಲವಾಗಿದೆ. ಏಕೆಂದರೆ ಶ್ರೀರಾಮುಲು ಬಳ್ಳಾರಿ ನಗರ ನಿವಾಸಿ.
ಅಂದರೆ ಕ್ಷೇತ್ರದ ಹೊರಗೆ ಅವರು ವಾಸವಾಗಿರುವುದರಿಂದ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇಲ್ಲದೇ ಇರುವುದರಿಂದ ಅವರು ತಮಗೆ ತಾವೇ ಮತ ಹಾಕಿಕೊಳ್ಳುವ ಭಾಗ್ಯದಿಂದ ವಂಚಿತರಾಗಿದ್ದಾರೆ. ಇನ್ನು, ಕಾಂಗ್ರೆಸ್ ಅಭ್ಯರ್ಥಿಯ ಪಾಡೂ ಇದೇ ಆಗಿದೆ. ಅಭ್ಯರ್ಥಿ ರಾಮಪ್ರಸಾದ್ ನಗರವಾಸಿಯಾಗಿರುವುದರಿಂದ ಗ್ರಾಮೀಣ ಕ್ಷೇತ್ರದಲ್ಲಿ ಮತ ಚಲಾವಣೆ ಹಕ್ಕು ಹೊಂದಿಲ್ಲ.
ಕ್ಷೇತ್ರದಲ್ಲಿ ಕಂಡುಬಂದಿರುವ ಬಿಸರುಸಿನ ಪೈಪೋಟಿ ನೋಡಿದಾಗ ಆಕಸ್ಮಾತ್ ಈ ಇಬ್ಬರು ಅಭ್ಯರ್ಥಿಗಳಲ್ಲಿ ಯಾರೇ ಒಬ್ಬರೂ ಒಂದೇ ಒಂದು ಮತದಿಂದ ಸೋಲುವ ಪ್ರಮೇಯ ಬಂದರೆ (ಈ ಛಾನ್ಸ್ ತುಂಬಾ ಕಡಿಮೆ ಆದರೂ) ಅಂತಹ ಅಭ್ಯರ್ಥಿಯ ಪಾಡೇನು, ಸುಮ್ಮನೆ ಒಮ್ಮೆ ಊಹಿಸಿಕೊಳ್ಳಿ!












Click it and Unblock the Notifications