ಬಳ್ಳಾರಿ ಉಪ ಚುನಾವಣೆ ಮತದಾನ ಆರಂಭ

bellary-rural-bypolls-nov-30-voting-starts
ಬಳ್ಳಾರಿ, ನ.29: ಸಕಲ ಸರಕಾರಿ ಭದ್ರತೆಗಳೊಂದಿಗೆ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮತದಾನ ಆರಂಭವಾಗಿದೆ. ಮತದಾರ ದೇವರುಗಳ ಮುಂದೆ ಹೋಗುವ ಮೊದಲು ಕಣದಲ್ಲಿ ಉಳಿದ ಮೂರ್ನಾಲ್ಕು ಅಭ್ಯರ್ಥಿಗಳು ದೇವರ ಪೂಜೆ ಸಲ್ಲಿಸಿದ್ದಾರೆ. ಒಬ್ಬ ಅಭ್ಯರ್ಥಿ (ಶ್ರೀರಾಮುಲು) ಮಾತ್ರ ಕೃಷ್ಣನ ಜನ್ಮಸ್ಥಾನದಲ್ಲಿರುವ ಪ್ರಭುವಿನ (ಜನಾರ್ದನ ರೆಡ್ಡಿ) ಆಶೀರ್ವಾದ ಬೇಡಿದ್ದಾರೆ.

ಮನೆಯಲ್ಲೇ ಪೂಜೆ ನೆರವೇರಿಸಿದ ಬಿಜೆಪಿಯ ಗಾದಿ ಲಿಂಗಪ್ಪ ಅವರು ಮೊದಲಿಗರಾಗಿ ಹಗರಿ ಗ್ರಾಮದಲ್ಲಿ ಮತ ಚಲಾಯಿಸಿದರು. ಬಿಜೆಪಿ ಸರಕಾರ ಜನಪರ ಕೆಲಸ ಮಾಡಿದ್ದಾರೆ. ಜನರ ಆಶೀರ್ವಾದ ನನ್ನ ಮೇಲಿದೆ. ಆದ್ದರಿಂದ ಜಯ ಗಳಿಸುವುದು ನೂರಕ್ಕೆ ನೂರರಷ್ಟು ನಿಶ್ಚಿತ ಎಂದು ಲಿಂಗಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಅಭ್ಯರ್ಥಿ ರಾಮಪ್ರಸಾದ್ ಕನಕ ದುರ್ಗಮ ಗುಡಿಗೆ ಹೋಗಿ ದೇವಿಯ ಆಶೀರ್ವಾದ ಪಡೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+