ಯಡಿಯೂರಪ್ಪಗೆ ನಿಜಕ್ಕೂ ಲಕ್ ತಿರುಗಿದೆ ಕಂಡ್ರಿ

ಸಿರಾಜಿನ್ ಬಾಷಾ ದಾಖಲಿಸಿದ್ದ ಐದು ಖಾಸಗಿ ದೂರುಗಳ ಪೈಕಿ ನಾಲ್ಕರಲ್ಲಿ ಯಡಿಯೂರಪ್ಪ, ಅವರ ಪುತ್ರರಾದ ರಾಘವೇಂದ್ರ, ವಿಜಯೇಂದ್ರ ಮತ್ತು ಅಳಿಯ ಸೋಹನ್ ಕುಮಾರ್‌ಗೆ ಜಾಮೀನು ನೀಡಿದ್ದ ಹೈಕೋರ್ಟ್, ಐದನೆ ದೂರಿನಲ್ಲೂ ಅವರಿಗೆ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ನೀಡಿದೆ.
ನಿರೀಕ್ಷಣಾ ಜಾಮೀನು ಕೋರಿದ್ದ ಯಡಿಯೂರಪ್ಪ ಅವರ ವಕೀಲರ ಮನವಿಯನ್ನು ನ್ಯಾ.ಎಚ್. ಬಿಲ್ಲಪ್ಪ ಪುರಸ್ಕರಿಸಿದ್ದಾರೆ. ತಲಾ 2ಲಕ್ಷ ರೂ. ಮೊತ್ತದ ಬಾಂಡ್, ಇಬ್ಬರು ಭದ್ರತಾ ಜಾಮೀನು ನೀಡಬೇಕು. ಸಾಕ್ಷಿಗಳನ್ನು ಸಂಪರ್ಕಿಸುವಂತಿಲ್ಲ, ಬೆದರಿಕೆ ಒಡ್ಡುವಂತಿಲ್ಲ. ಕೋರ್ಟ್ ಅನುಮತಿಯಿಲ್ಲದೆ ದೇಶಬಿಟ್ಟು ಹೋಗುವಂತಿಲ್ಲ. ಸಾಕ್ಷಾಧಾರಗಳನ್ನು ನಾಶಪಡಿಸುವಂತಿಲ್ಲ ಎಂದು ಸೂಚಿಸಲಾಗಿದೆ.
ಜಾಮೀನು ನೀಡಿದ್ದು ಏಕೆ?: ಆರೋಪಿಗೆ ಯಾವುದೇ ಕ್ರಿಮಿನಲ್ ಇತಿಹಾಸ ಇಲ್ಲ. ಜೊತೆಗೆ ಯಾವುದೇ ಗಂಭೀರ ಆರೋಪ ಕೂಡಾ ಇಲ್ಲ ಹಾಗಾಗಿ ಷರತ್ತುಗಳನ್ನು ವಿಧಿಸಿ ನಿರೀಕ್ಷಣಾ ಜಾಮೀನು ನೀಡಲಾಗಿದೆ. ಸಿರಾಜಿನ್ ಬಾಷಾ ಅವರು ಸುಪ್ರೀಂಕೋರ್ಟ್ ಗೆ ಮೊರೆ ಹೊಕ್ಕಿದ್ದು ವಿಚಾರಣೆ ನಡೆಯಬೇಕಿದೆ.












Click it and Unblock the Notifications