ಇನ್ಫೋಸಿಸ್ ಉದ್ಯೋಗಿ ಸ್ಮಿತಾ ಬಲಿಗೆ ಗಂಡನೇ ಕಾರಣ?

ಸ್ಮಿತಾರಾವ್ ಸಾವಿಗೆ ಕಾರಣ ಎಂಬ ಆರೋಪದ ಮೇಲೆ ಪತಿ ರೋಹಿತ್ ಅನಂತಕೃಷ್ಣರನ್ನು ಹೆಣ್ಣೂರು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಗೂಗಲ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ರೋಹಿತ್ ಮೇಲೆ ಸ್ಮಿತಾ ರಾವ್ ತಾಯಿ ಪದ್ಮಜಾರಾವ್ ನೇರವಾಗಿ ಆರೋಪ ಹೊರೆಸಿದ್ದಾರೆ. 2007ರಲ್ಲಿ ವಿವಾಹವಾಗಿದ್ದ ಈ ಜೋಡಿಯ ಕೌಟುಂಬಿಕ ಕಲಹ ಮುಗಿಲು ಮುಟ್ಟಿತ್ತು. ನನ್ನ ಮಗಳನ್ನು ಮಾನಸಿಕವಾಗಿ ಹಿಂಸಿಸುವುದು ಅಳಿಯ ರೋಹಿತ್ ಗೆ ದಿನ ನಿತ್ಯದ ಕಾಯಕವಾಗಿತ್ತು ಎಂದು ಪದ್ಮಜಾರಾವ್ ಪೊಲೀಸರಿಗೆ ದೂರಿತ್ತಿದ್ದಾರೆ.
ಕೊನೆ ಕ್ಷಣದಲ್ಲಿ ಪತ್ನಿ ಸ್ಮಿತಾರನ್ನು ಬದುಕಿಸಿಕೊಳ್ಳಲು ಯತ್ನಿಸಿ ವಿಫಲರಾದ ರೋಹಿತ್ ಮೇಲೆ ಐಪಿಸಿ ಸೆಕ್ಷನ್ 304 ಬಿ ಹಾಗೂ 498A ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಮಿತಾ ರಾವ್ ಮರಣೋತ್ತರ ಪರೀಕ್ಷೆ ವರದಿ ಮಂಗಳವಾರ ಸಂಜೆ ವೇಳೆಗೆ ಸಿಗುವ ಸಾಧ್ಯತೆಯಿದೆ.
ಸುಳಿವು ನೀಡದ ಪೊಲೀಸರು: ಮಂತ್ರಿ ಸ್ಪ್ಲೆಂಡರ್ ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದುಕೊಂಡು ಸಾಯುವುದಕ್ಕೂ ಮುನ್ನ ಸ್ಮಿತಾ ತಮ್ಮ ಪತಿ ರೋಹಿತ್ ಗೆ ಕೊನೆ ಬಾರಿಗೆ ಕಾಲ್ ಮಾಡಿದ ವಿಷ್ಯವನ್ನು ಮಾತ್ರ ಪೊಲೀಸರು ಬಹಿರಂಗಪಡಿಸಿದ್ದಾರೆ. ಸ್ಮಿತಾ ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ಬಗ್ಗೆ ಯಾವುದೇ ಸುಳಿವು ಸೂಚನೆ ನೀಡಲು ಹೆಣ್ಣೂರು ಪೊಲೀಸ್ ಇನ್ಸ್ ಪೆಕ್ಟರ್ ಪ್ರಭಾಕರ್ ನಿರಾಕರಿಸಿದ್ದಾರೆ.












Click it and Unblock the Notifications