ಚಿತ್ರದುರ್ಗದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ
ಚಿತ್ರದುರ್ಗ,
ನ.28: ಲಿಫ್ಟ್ ಕೊಡುವಂತೆ ಕೇಳಿದ ಬಾಲಕಿಯೊಬ್ಬಳನ್ನು ಮೋಟಾರ್ ಸೈಕಲ್‌ನಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿರುವ ಘಟನೆ ತಾಲ್ಲೂಕಿನ ದೇವಪುರದಹಟ್ಟಿ ಗ್ರಾಮದ ಸೇತುವೆಯ ಬಳಿ ನಡೆದಿದೆ. ಜಾನುಕೊಂಡ ಗ್ರಾಮದ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಲಾಗಿದೆ. id="toptextpromo">ಅತ್ಯಾಚಾರ
ಮಾಡಿದ ವ್ಯಕ್ತಿ ಅದೇ ಗ್ರಾಮದ ಅಶ್ವತ್ಥ ಎಂಬುವನಾಗಿದ್ದಾನೆ. ಹೊಳಲ್ಕೆರೆ ರಸ್ತೆಯ ದೇವಪುರದಹಟ್ಟಿ ಸೇತುವೆಯ ಬಳಿ ಅಶ್ವತ್ಥನು ಮೋಟಾರ್ ಸೈಕಲ್‌ನಲ್ಲಿ ಹೋಗುತ್ತಿರುವಾಗ ಈ ಬಾಲಕಿಯು ತಮ್ಮನೊಂದಿಗೆ ಜಮೀನಿಗೆ ಹೋಗಲು ಲಿಫ್ಟ್ ಕೇಳಿದ್ದರು. id='are-slot-1' class='oiad oi-axt oiadv'> id='top-searched-articles'>ಅವರಿಬ್ಬರನ್ನು
ಮೋಟಾರ್ ಸೈಕಲ್‌ನಲ್ಲಿ ಕೂರಿಸಿಕೊಂಡು ಹೋದ ಅಶ್ವತ್ಥನು ಸ್ವಲ್ಪ ದೂರ ಮುಂದೆ ಹೋಗಿ ಮೋಟಾರ್ ಸೈಕಲ್ ನಿಲ್ಲಿಸಿ ಮೆಕ್ಕೆಜೋಳದ ಜಮೀನಿಗೆ ಮಂಜುಳನ್ನು ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಈ ಬಗ್ಗೆ ಯಾರಿಗಾದರೂ ಹೇಳಿದರೆ ನಿನ್ನನ್ನು ಸಾಯಿಸುತ್ತೇನೆ ಎಂದು ಪ್ರಾಣ ಬೆದರಿಕೆಯನ್ನು ಸಹ ಹಾಕಿದ್ದಾನೆ. ಈ ಬಗ್ಗೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ. (ಒನ್‌ಇಂಡಿಯಾ ಕನ್ನಡ)











Click it and Unblock the Notifications