ಚುನಾವಣೆ ಮುಗಿಯುತ್ತಿದ್ದಂತೆ ಈಶ್ವರಪ್ಪ ಸೋದರ ಗಂಗಾಧರಪ್ಪ ಪದಚ್ಯುತಿ

eshwarappa-brother-bjp-rebell-episode-deepens
ಶಿವಮೊಗ್ಗ, ನ.28: ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪರ ಅವರ ಸೋದರ ಕೆ.ಎಸ್. ಗಂಗಾಧರಪ್ಪ ಜಿಲ್ಲಾ ಮಟ್ಟದಲ್ಲಿ ಹಾರಿಸಿರುವ ಬಂಡಾಯ ಬಾವುಟ ಜೋರಾಗಿಯೇ ಪಟಪಟಿಸುತ್ತಿದೆ. ಇದೇ ವೇಳೆ, ಗಂಗಾಧರಪ್ಪ ಅವರನ್ನು ನಗರಸಭಾ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಲು ಬಿಜೆಪಿಯಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಮತ್ತಷ್ಟು ಚುರುಕುಗೊಂಡಿವೆ. ಪ್ರಸ್ತುತ ಗಂಗಾಧರಪ್ಪ ಜತೆಗಿನ ಮಾತುಕತೆಗಳು ವಿಫಲವಾಗಿವೆ.

'ಗಂಗಾಧರಪ್ಪರನ್ನು ಕೆಲವರು ಹಾದಿ ತಪ್ಪಿಸಿದ್ದಾರೆ. ಇದರಿಂದ ಗೊಂದಲ ಸೃಷ್ಟಿಯಾಗಿದೆ. ಬಳ್ಳಾರಿ ಚುನಾವಣೆ ಮುಗಿಯುತ್ತಿದ್ದಂತೆ ಎಲ್ಲವೂ ಸ್ಪಷ್ಟವಾಗಲಿದೆ. ಈಶ್ವರಪ್ಪ ಅವರೇ ಪ್ರಕರಣ ಇತ್ಯರ್ಥಪಡಿಸಲಿದ್ದು, ಸುಖಾಂತ್ಯವಾಗಲಿದೆ' ಎಂದು ಬಿಜೆಪಿ ನಗರಸಭಾ ಸದಸ್ಯರೊಬ್ಬರು ತಿಳಿಸಿದ್ದಾರೆ.

ಆದರೆ, ಇನ್ನೂ 6 ತಿಂಗಳ ಕಾಲ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಅವಕಾಶ ನೀಡಿ ಎಂದು ಗಂಗಾಧರಪ್ಪ ಪಟ್ಟು ಹಿಡಿದಿದ್ದಾರೆ. ಯಾರ ಮಾತನ್ನೂ ಅವರು ಕೇಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಶತಾಯಗತಾಯ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿ ನಗರಸಭಾ ಸದಸ್ಯರು ನಾನಾ ಒತ್ತಡ ತಂತ್ರಗಳನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಈ ನಡುವೆ ಬಲವಂತವಾಗಿ ತನ್ನನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಲು ಯತ್ನಿಸಿದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಬೆದರಿಕೆಯನ್ನೂ ಗಂಗಾಧರಪ್ಪ ಹಾಕಿದ್ದಾರೆನ್ನಲಾಗಿದೆ. ಇದು ಪಕ್ಷದ ಮುಖಂಡರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಬಿಜೆಪಿ ನಗರಸಭಾ ಸದಸ್ಯರು ಗಂಗಾಧರಪ್ಪ ವಿರುದ್ಧ ಸಹಿ ಸಂಗ್ರಹಕ್ಕೆ ಚಾಲನೆ ನೀಡಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಗಂಗಾಧರಪ್ಪರ ಬೆಂಬಲಕ್ಕೆ ಯಾವ ಬಿಜೆಪಿ ಸದಸ್ಯರೂ ಇಲ್ಲ. ಈ ಹಿನ್ನೆಲೆಯಲ್ಲಿ ಗಂಗಾಧರಪ್ಪರ ಪದಚ್ಯುತಿಗೆ ಸಹಿ ಸಂಗ್ರಹ ಅಭಿಯಾನ ನಡೆಸಿ ಅದನ್ನು ಮಾಜಿ ಸಿಎಂ ಯಡಿಯೂರಪ್ಪಮತ್ತು ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪಗೆ ಸಲ್ಲಿಸಲು ಕೆಲವು ನಗರಸಭಾ ಸದಸ್ಯರು ಚಿಂತನೆ ನಡೆಸಿದ್ದಾರೆಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+