90 ನಿಮಿಷದಲ್ಲಿ 6 ಕಡೆ ಚಕಾಚಕ್ ಸರ ಅಪಹರಣ

Six Chain Snatching Incidents In Mumbai
ಮುಂಬೈ, ನ.28: ಕೇವಲ ತೊಂಭತ್ತೇ ನಿಮಿಷದ ಅಂತರದಲ್ಲಿ ಆರು ಕಡೆ ಸರಗಳ್ಳತನವಾಗಿರುವ ಘಟನೆ ಮುಂಬೈನಲ್ಲಿ ಭಾನುವಾರ ನಡೆದಿದೆ. ಬೆಳಗ್ಗಿನ ಜಾವ 8.15 ರಿಂದ 9.45ರ ನಡುವಿನಲ್ಲಿ ವಿವಿಧೆಡೆ ನಡೆದಿರುವ ಸರಗಳ್ಳತನದಿಂದ ಒಟ್ಟಾರೆ 4.32 ಲಕ್ಷ ಮೌಲ್ಯದ ಚಿನ್ನದ ಸರಗಳು ಕಳ್ಳರ ಪಾಲಾಗಿವೆ.

ನಿರ್ಜನ ಪ್ರದೇಶದಲ್ಲಿ ಓಡಾಡುವ ಮಹಿಳೆಯರನ್ನು ಬೈಕ್ ನಲ್ಲಿ ಅಡ್ಡಗಟ್ಟಿ ಸರ ಅಪಹರಣಗೊಳಿಸಲಾಗಿದೆ. ಡಿಬಿ ಮಾರ್ಗ್, ದಾದರ್, ಘಾಟ್‌ಕೋಪರ್, ಗೋವಂಡಿ, ಬೊರಿವ್ಲಿ, ಗೋರೆಗಾಂವ್ ಮುಂತಾದೆಡೆ ಕಳ್ಳರು ಸರ ದೋಚಿ ಪರಾರಿಯಾಗಿದ್ದಾರೆ.

ಬೊರಿವ್ಲಿ ಎಂಬಲ್ಲಿ ವಿನಯ ಮೆಹಂದಳೆ ಮತ್ತು ಆಕೆ ಸ್ನೇಹಿತೆ ಹಂಸಾ ಪರ್ಮಾರ್ ನಡೆದುಹೋಗುತ್ತಿದ್ದ ಸಂದರ್ಭ ಬೈಕಿನಲ್ಲಿ ಬಂದ ಇಬ್ಬರು ಯುವಕರು ಸುಮಾರು 1.41 ಲಕ್ಷ ಮೌಲ್ಯದ ಇಬ್ಬರ ಸರವನ್ನು ದೋಚಿದ್ದಾರೆ. ಅಂತೆಯೇ ಘಾಟ್‌ಕೋಪರ್ ನಿವಾಸಿ ಪ್ರೇಮಾ ಶೆಟ್ಟಿ ಆಟೋ ಏರುವ ಸಮಯದಲ್ಲಿ ಸುಮಾರು 1 ಲಕ್ಷ ಮೌಲ್ಯದ ಚಿನ್ನದ ಸರವನ್ನು ಕಿತ್ತುಕೊಳ್ಳಲಾಗಿದೆ. ಅದೇ ರೀತಿ ದಕ್ಷಿಣ ಮುಂಬೈ, ದಾದರ್ ಮುಂತಾದೆಡೆ ಸರಗಳ್ಳತನ ನಡೆದಿದೆ.

ಮುಂಬೈ ಪೊಲೀಸ್ ಮುಖ್ಯಾಧಿಕಾರಿ ಅರುಪ್ ಪಟ್ನಾಯಕ್ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಈ ಘಟನೆಗಳಿಗೆ ಬೇಗ ಉತ್ತರಿಸುವಂತೆ ತಿಳಿಸಿದ್ದಾರೆ. ಮುಂಬೈನ ಸುತ್ತ ಮುತ್ತ ಪೊಲೀಸರು ಕಳ್ಳರ ಜಾಡು ಹಿಡಿದು ಗಸ್ತು ತಿರುಗುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+