ಮತ್ತೆ ಯಡಿಯೂರಪ್ಪಗೇ ಅಧಿಕಾರ ಹಸ್ತಾಂತರ: ಸಿಎಂ ಸದಾನಂದ

BS Yeddyurappa will be back to power CM Sadananda Gowda
ಬಳ್ಳಾರಿ, ನ.27: 'ಅನುಮಾನವೇ ಬೇಡ. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಕೈಗೇ ಮತ್ತೆ ಅಧಿಕಾರದ ಚುಕ್ಕಾಣಿ ನೀಡಲಾಗುವುದು' ಎಂದು ಮುಖ್ಯಮಂತ್ರಿ ಸದಾನಂದ ಗೌಡರು ಹೇಳಿದ್ದಾರೆ. ಆದರೆ ಯಡಿಯೂರಪ್ಪ ಅವರು ಅಧಿಕಾರಕ್ಕೆ ಬರುವುದು ಈಗಲೋ ಅಥವಾ ಮುಂದಿನ ವಿಧಾನಸಭೆ ಚುನಾವಣೆಯ ಬಳಿಕವೋ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ.

ಯಡಿಯೂರಪ್ಪನವರು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ರಾಜಕೀಯ ಕುತಂತ್ರದಿಂದ ಅಧಿಕಾರ ಕಳೆದುಕೊಂಡಿದ್ದಾರೆ. ಆದರೆ ಎಲ್ಲ ಆರೋಪಗಳಿಂದ ಮುಕ್ತರಾಗಿ ಫೀನಿಕ್ಸ್ ನಂತೆ ಮತ್ತೆ ಎದ್ದು ಬಂದು ಆಡಳಿತದ ಚುಕ್ಕಾಣಿ ಹಿಡಿದು ಅಧಿಕಾರ ನಡೆಸುತ್ತಾರೆ ಎಂದು ಸಾಕ್ಷಾತ್ ಮುಖ್ಯಮಂತ್ರಿಯವರೇ ತುಂಬು ಆತ್ಮವಿಶ್ವಾಸದಿಂದ ನುಡಿದಿದ್ದಾರೆ.

ಬಳ್ಳಾರಿ ಗ್ರಾಮಾಂತರ ಉಪ ಚುನಾವಣೆ ಪ್ರಚಾರ ವೇಳೆ ಸದಾನಂದರು ಈ ಮಾಹಿತಿ ನೀಡಿದ್ದಾರೆ. 'ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಯಡಿಯೂರಪ್ಪ ಅವರ ಪರಿಶ್ರಮದಿಂದಾಗಿ. ವಾಜಪೇಯಿ ದೃಷ್ಟಿಕೋನದಲ್ಲಿ ಯಡಿಯೂರಪ್ಪ ನಡೆಯುತ್ತಿದ್ದಾರೆ. ಇದರಿಂದ ಕೆಂಗೆಟ್ಟ ಪ್ರತಿಪಕ್ಷಗಳು ಅಪಪ್ರಚಾರ ಮತ್ತು ತೇಜೋವಧೆಯಲ್ಲಿ ನಿರತವಾಗಿವೆ.

ಯಡಿಯೂರಪ್ಪ ಅವರನ್ನು ಮುಗಿಸಿದರೆ ಬಿಜೆಪಿಯನ್ನು ಮುಗಿಸಿದಂತೇ ಎಂಬುದು ಅವರ ಲೆಕ್ಕಾಚಾರ. ಆದರೆ ಇದ್ಯಾವುದೂ ಕೈಗೂಡುವುದಿಲ್ಲ. ಎಲ್ಲ ಆರೋಪಗಳಿಂದ ಮುಕ್ತರಾಗಿ ಅವರು ಮತ್ತೆ ಅಧಿಕಾರಕ್ಕೆ ಬರುತ್ತಾರೆ ಎಂದು ಸದಾನಂದರು ಯಡಿಯೂರಪ್ಪ ಅವರಲ್ಲಿ ತಮ್ಮ ಅಖಂಡ ನಿಷ್ಠೆ ಪ್ರದರ್ಶಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+