ಶಾಸಕ ಸಂಪಂಗಿಗೆ ಮುಖಭಂಗ, ಜಡ್ಜ್ ಬದಲಾವಣೆಗೆ ನಕಾರ

ನ್ಯಾ.ಎನ್.ಕೆ.ಸುಧೀಂದ್ರರಾವ್ ರಾಜಕಾರಣಿಗಳ ವಿರುದ್ಧ ನಕಾರಾತ್ಮಕ ಧೋರಣೆ ಹೊಂದಿದ್ದಾರೆ ಎಂಬುದು ಕೇವಲ ಅನುಮಾನವಷ್ಟೆ ಹೊರತು, ಆ ಸಂಬಂಧ ಸೂಕ್ತ ಸಾಕ್ಷಾಧಾರಗಳಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದ್ದಾರೆ.
ದಲಿತ ಸಂಘರ್ಷ ಸಮಿತಿಯ ಸದಸ್ಯ ಬಿ.ಎಂ.ರಾಮಚಂದ್ರ ಮತ್ತು ಗುತ್ತಿಗೆದಾರ ಅಮೇಂದ್ರ ವೌನಿ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿ 'ಸಂಪಂಗಿಯ ಜಾಮೀನು ರದ್ದುಗೊಳಿಸುವಂತೆ ನ್ಯಾ.ಸುಧೀಂದ್ರರಾವ್‌ಗೆ ನಾನೇ ಹೇಳಿದ್ದು ಎಂದು ನ್ಯಾಯಾಧೀಶರ ಸಹೋದರ ಕಾಂಗ್ರೆಸ್ ಮುಖಂಡ ಎನ್.ಕೆ.ಬದ್ರೀನಾಥ್ ಬಂಗಾರ ಪೇಟೆಯಲ್ಲಿ ಎಲ್ಲರಿಗೂ ಹೇಳುತ್ತಿದ್ದಾರೆ ಎಂದು ಹೇಳಿದ್ದರು. ಈ ಪ್ರಮಾಣ ಪತ್ರವನ್ನು ಸಹ ನ್ಯಾಯಮೂರ್ತಿಗಳು ವಜಾಗೊಳಿಸಿದರು.
ಗಾಯದ ಮೇಲೆ ಬರೆ: ಲೋಕಾಯುಕ್ತ ಕೋರ್ಟ್ ವಿಚಾರಣಾ ಪ್ರಕ್ರಿಯೆಗೆ 15 ದಿನಗಳ ಕಾಲದ ತಡೆಯಾಜ್ಞೆ ನೀಡಿದ್ದ ಹೈಕೋರ್ಟ್ ಗುರುವಾರ ತಡೆಯಾಜ್ಞೆಯನ್ನು ತೆರವುಗೊಳಿಸಿದೆ. ಲೋಕಾಯುಕ್ತ ಕೋರ್ಟ್‌ನಲ್ಲಿ ಡಿ.2ರಂದು ಪ್ರಕರಣದ ವಿಚಾರಣೆ ನಡೆಯಲಿದೆ.












Click it and Unblock the Notifications