ಯಡ್ಡಿ ಗೂಂಡಾ ಹೇಳಿಕೆ, ಸರ್ಕಾರ ಪತನಕ್ಕೆ ನಾಂದಿ

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಅವರು, ಯಡಿಯೂರಪ್ಪ ಅವರ ಹೇಳಿಕೆಯನ್ನು ಖಂಡಿಸುತ್ತಾ, ಬಿಜೆಪಿ ಸರ್ಕಾರ ತನ್ನ ವೈಫಲ್ಯವನ್ನು ಪರೋಕ್ಷವಾಗಿ ಒಪ್ಪಿಕೊಂಡಿದೆ. ರೆಡ್ಡಿ ಸೋದರರ ಮೇಲೆ ಆರೋಪ ಹೊರೆಸಿದರೆ ಅದು ಬಿಜೆಪಿ ಮೇಲೆ ಆರೋಪ ಹೊರೆಸಿದಂತೆ.
ಯಡಿಯೂರಪ್ಪ ಅವರ ಹೇಳಿಕೆ ನಿಜವಾದರೆ ಸರ್ಕಾರ ಅಧಿಕಾರದಲ್ಲಿ ಮುಂದುವರಿಯುವ ಅರ್ಹತೆಯನ್ನು ಕಳೆದು ಕೊಂಡಿದೆ.ಈ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಜೊತೆ ಚರ್ಚಿಸಿ ಈ ಸರಕಾರವನ್ನು ವಜಾಗೊಳಿಸಲು ರಾಜ್ಯಪಾಲರಿಗೆ ಮನವಿ ಸಲ್ಲಿಸುವುದಾಗಿ ರೇವಣ್ಣ ತಿಳಿಸಿದರು.
ಗಣಿಗಾರಿಕೆ ತನಿಖೆ ಸಿಬಿಐಗೆ ವಹಿಸಿ: ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಯ ಬಗ್ಗೆ ಮುಖ್ಯ ಮಂತ್ಗಳಾದಿಯಾಗಿ ಎಲ್ಲರೂ ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ಸರಿಯಲ್ಲ.ವರದಿ ನ್ಯಾಯಸಮ್ಮತವಾಗಿಲ್ಲ ಎನ್ನುವುದಾದರೆ 2001ರಿಂದ ಈವರೆಗೆ ನಡೆದಿರುವ ಗಣಿಗಾರಿಕೆಯ ತನಿಖೆಯನ್ನು ಸಿಬಿಐಗೆ ವಹಿಸಲಿ ಎಂದು ಸರಕಾರಕ್ಕೆ ರೇವಣ್ಣ ಸವಾಲು ಹಾಕಿದರು.
ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿ ಎಂದು ಜೆಡಿಎಸ್ ಕರೆ ನೀಡಿರುವುದು ನಿಜ.ಆದರೆ, ಪಕ್ಷೇತರ ಅಭ್ಯರ್ಥಿ ಶ್ರೀರಾಮುಲುರನ್ನು ಬೆಂಬಲಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿಲ್ಲ ಎಂದು ಅವರು ತಿಳಿಸಿದರು.












Click it and Unblock the Notifications