ಬಿದರಿ ಬೆನ್ನಿಗೆ ಗುದ್ದಿದ ಸರ್ಕಾರ, ಡಿಜಿಯಾಗಿ ಇನ್ಫೆಂಟ್?

Govt ditches Shankar Bidari
ಬೆಂಗಳೂರು, ನ.18: ರಾಜ್ಯ ಪೊಲೀಸ್ ಮಹಾನಿರ್ದೇಶಕ ನೀಲಂ ಅಚ್ಯುತ್ ರಾವ್ ಅವರ ನಿವೃತ್ತಿ ನಂತರ ಅವರ ಸ್ಥಾನಕ್ಕೆ ಗೃಹರಕ್ಷಕ ದಳದ ಡಿಜಿಪಿ ಎ.ಆರ್. ಇನ್ಫೆಂಟ್ ಅವರನ್ನು ಕೂರಿಸಲು ಸರ್ಕಾರ ಮನಸ್ಸು ಮಾಡಿದೆ. ಆದರೆ, ಯಡಿಯೂರಪ್ಪ ಅವರ ಆಪ್ತ ಶಂಕರ್ ಬಿದರಿಗೆ ಇದರಿಂದ ಭಾರಿ ಹಿನ್ನೆಡೆಯಾಗಿದೆ.

ಈ ಹಿಂದೆ ಡಿಜಿ ಐಜಿ ಸ್ಥಾನಕ್ಕೆ ಐಪಿಎಸ್ ಅಧಿಕಾರಿಗಳಾದ ಎಸ್.ಟಿ.ರಮೇಶ್, ಡಾ.ಡಿ.ವಿ.ಗುರುಪ್ರಸಾದ್ (ಸಿಐಡಿ ಹಾಲಿ ಮಹಾನಿರ್ದೇಶಕ) ಸಹ ಆಕಾಂಕ್ಷಿಗಳಾಗಿದ್ದರು. ಶಂಕರ್ ಬಿದರಿ ಅವರು ಹುದ್ದೆಗೆ ಅರ್ಹತೆ ಸಾಲದು ಎಂದು ಅನರ್ಹಗೊಳಿಸಲಾಗಿತ್ತು.

ಆರೆಸ್ಸೆಸ್ ಕೈವಾಡ: ಶಂಕರ್ ಬಿದರಿ ಅವರ ಆಯ್ಕೆಯಾಗದಂತೆ ತಡೆಯುವುದರಲ್ಲಿ ಆರೆಸ್ಸೆಸ್ ಕೈವಾಡ ಇದೆ ಎನ್ನಲಾಗಿದೆ. ಡಿಜಿ ಐಜಿಪಿ ನೇಮಕ ಸಂಬಂಧ ಆರೆಸ್ಸೆಸ್ ಮುಖಂಡರ ಜೊತೆ ನಡೆದ ಸಭೆಯಲ್ಲಿ ಎ.ಆರ್. ಇನ್ಫೆಂಟ್ ಅವರ ಹೆಸರನ್ನು ಆರೆಸ್ಸೆಸ್ ಮುಖಂಡರು ಮುಖ್ಯಮಂತ್ರಿ ಡಿವಿ ಸದಾನಂದ ಗೌಡರಿಗೆ ಸೂಚಿಸಿದರು ಎನ್ನಲಾಗಿದೆ.

ಅಲ್ಪ ಸಂಖ್ಯಾತರ ವೋಟ್ ಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ಆರೆಸ್ಸೆಸ್, ಇನ್ಫಾಂಟ್ ನೇಮಕಕ್ಕೆ ಒಲವು ತೋರಿದೆ. ಮುಮ್ತಾಜ್ ಅಲಿಖಾನ್ ಸಚಿವ ಸ್ಥಾನ ಕಳೆದುಕೊಂಡ ಮೇಲೆ ಬಿಜೆಪಿ ಸರ್ಕಾರದಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಇಳಿಮುಖವಾಗಿದೆ.

ಡಿಜಿ ಹುದ್ದೆ ರೇಸ್ ನಲ್ಲಿ ಅನುಭವದ ಆಧಾರದ ಮೇಲೆ ಆಯ್ಕೆ ಬಯಸಿರುವ ಶಂಕರ್ ಬಿದರಿ, ಇನ್ಫೆಂಟ್, ಡಿಜಿಪಿ ಸುಶಾಂತ್ ಮಹಾಪತ್ರ ಹೆಸರು ಚಾಲ್ತಿಯಲ್ಲಿದೆ. ಅಂತಿಮ ಪಟ್ಟಿಯನ್ನು ಕೇಂದ್ರ ಲೋಕಸೇವಾ ಆಯೊಗ(UPSC)ಗೆ ಕಳುಹಿಸಿಕೊಡಬೇಕು. ನಂತರ ಹೊಸ ಡಿಜಿಪಿ ನೇಮಕ ತೀರ್ಮಾನವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+