ಡಿ.12ರ ತನಕ ಮಾತ್ರ ಸಚಿವ ನಿರಾಣಿಗೆ ರಿಲೀಫ್

ಉದ್ಯಮಿ ಆಲಂ ಪಾಷಾ ಸಲ್ಲಿಸಿರುವ ಖಾಸಗಿ ದೂರಿನ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಕೆ.ಸುಧೀಂದ್ರ ರಾವ್ ಅವರು, ತನಿಖಾವಧಿ ವಿಸ್ತರಣೆ ಕೋರಿದ್ದ ಲೋಕಾಯುಕ್ತ ಪೊಲೀಸರ ಮನವಿಯನ್ನು ಪುರಸ್ಕರಿಸಿ ಡಿ. 12ರವರೆಗೂ ವಿಸ್ತರಿಸಿ ಆದೇಶ ನೀಡಿದರು.
ಪ್ರಕರದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಡಿವೈಎಸ್‌ಪಿ ಎಸ್.ಗಿರೀಶ್ ತನಿಖೆಗೆ ಎರಡು ತಿಂಗಳ ಕಾಲಾವಕಾಶ ಕೋರಿದ್ದರು.ಆದರೆ, ಡಿ.12ರೊಳಗೆ ಪೂರ್ಣ ಪ್ರಮಾಣದ ವರದಿಯನ್ನು ನೀಡುವಂತೆ ನ್ಯಾ. ಸುಧೀಂದ್ರ ರಾವ್ ಅವರು ಸೂಚಿಸಿದರು.
ಪ್ರಸ್ತುತ ಪ್ರಕರಣದಲ್ಲಿ ಮುರುಗೇಶ್ ನಿರಾಣಿ ಅಲ್ಲದೆ ಎಚ್ ಆರ್ ನಿರಾಣಿ, ಶರಣ ಬಸಯ್ಯ, ಕರಿಯಣ್ನನವರ್, ಬೇಗೂರು ರುದ್ರಮೂರ್ತಿ, ಪೂರ್ಣಚಂದ್ರ, ಆರ್ ವಿ ವಡ್ನಾಳ್, ಶಾಂತ ಸುಬೀರ ಬೇಲೂರು, ಮೋಹನ್ ಎಂ, ಹೀರೇಮಠ ಮತ್ತು ಎಂ ರೋಷಯ್ಯ ಎಂಬುವರ ಮೇಲೆ ಆರೋಪವನ್ನು ಹೊರೆಸಲಾಗಿದೆ.
ಕೈಗಾರಿಕಾ ಉದ್ದೇಶಕ್ಕಾಗಿ ಕೆಐಎಡಿಬಿ ಮೂಲಕ ರಾಜ್ಯದ ವಿವಿಧ ಪ್ರದೇಶದಲ್ಲಿ ವಶಪಡಿಸಿಕೊಂಡಿದ್ದ 1, 690ಕ್ಕೂ ಹೆಚ್ಚು ಎಕರೆ ಭೂಮಿಯನ್ನು ತಮ್ಮ ಕುಟಂಬ ಸದಸ್ಯರ ಮತ್ತು ಆಪ್ತರ ಒಡೆತನದ ಕಂಪೆನಿಗಳಿಗೆ ನಿಯಮ ಬಾಹಿರವಾಗಿ ಮಂಜೂರು ಮಾಡಿದ್ದಾರೆ ಎಂದು ನಿರಾಣಿ ಅವರ ಮೇಲೆ ಆರೋಪವಿದೆ.












Click it and Unblock the Notifications