ಬಳ್ಳಾರಿ ಉಪಚುನಾವಣೆ ಅಖಾಡಕ್ಕೆ ಯಡಿಯೂರಪ್ಪ ಧುಮುಕುತ್ತಾರಾ?
ಬೆಂಗಳೂರು,
ನ.17: ಗಣಿ ನಾಡು ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕಣ ರಂಗೇರುತ್ತಿದೆ. ಇದುವರೆಗಿನ ಉಪಚುನಾವಣೆಗಳಲ್ಲಿ ಬಿಜೆಪಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಳ್ಳಾರಿ ರೆಡ್ಡಿ ಸೋದರರು ಈಗ ವಿಮುಖರಾಗಿದ್ದಾರೆ. ಇವರಿಬ್ಬರ ನಡುವೆಯೇ ಈಗ ಧರ್ಮಯುದ್ಧ ನಡೆಯುವಂತಾಗಿರುವುದು ವಿಪರ್ಯಾಸವೇ ಸರಿ. id="toptextpromo">ಅದಕ್ಕೂ
ಮುನ್ನ, ಈಗಾಗಲೇ ಅಖಾಡಕ್ಕಿಳಿದು ತೊಡೆತಟ್ಟುತ್ತಿರುವ ಶ್ರೀರಾಮುಲುಗೆ ಸಮಬಲವಾಗಿ ಬಿಜೆಪಿ ಅಭ್ಯರ್ಥಿ ಪೈಪೋಟಿ ನೀಡುವಂತಾಗಲು ಯಜಮಾನ್ ಯಡಿಯೂರಪ್ಪನವರು ಪ್ರಚಾರಕ್ಕೆ ಬರಲು ಒಪ್ಪಿಕೊಳ್ಳುತ್ತಾರಾ ಎಂಬುದು ಸದ್ಯದ ಪ್ರಶ್ನೆ. id='are-slot-1' class='oiad oi-axt oiadv'> id='top-searched-articles'>ನಾಡಿನ
ಮೂಲೆಮೂಲೆಯಲ್ಲೂ ತಿರುಗಾಡಿ ಪಕ್ಷವನ್ನು ಕಟ್ಟಿ ಬೆಳೆಸಿದ ಶಕ್ತಿ ಎಂಬ ಬಿರುದಿಗೆ ಅನಾಯಾಸವಾಗಿ ಪಾತ್ರವಾಗಿರುವ ಯಜಮಾನ್ ಯಡಿಯೂರಪ್ಪನವರಿಗೆ ಬಿಜೆಪಿ ಮಂದಿಯೇ ತಮ್ಮನ್ನು ಮೂಲೆಗುಂಪು ಮಾಡಲು ಹವಣಿಸುತ್ತಿದ್ದಾರೆ ಎಂಬುದು ಮನದಟ್ಟಾಗಿದೆ. ಆದರೆ ಬಳ್ಳಾರಿ ಅಖಾಡಕ್ಕೆ ಯಡಿಯೂರಪ್ಪ ಅನಿವಾರ್ಯ ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹೊತ್ತಿನಲ್ಲಿ ಪ್ರಚಾರಕ್ಕೆ ಒಪ್ಪಿಕೊಳ್ಳುತ್ತಾರಾ ಎಂಬುದು ಪ್ರಶ್ನೆ.











Click it and Unblock the Notifications