ಭೂಮಿ ನುಂಗಿದ ಡಿಎಂಕೆ ಸಂಸದ ರಿತೀಶ್ ಬಂಧನ
ಚೆನ್ನೈ,
ನ.15: ಡಿಎಂಕೆ ಹಾಗೂ ಎಐಎಡಿಎಂಕೆ ಪರಸ್ಪರ ಕಿತ್ತಾಟದಿಂದ ಯಾರಿಗೆ ಲಾಭವಾಗುತ್ತಿದೆಯೋ ಗೊತ್ತಿಲ್ಲ. ಆದರೆ, ಕೆಲ ಭ್ರಷ್ಟರ ಬಂಧನವಂತೂ ಮುಂದುವರೆದಿದೆ. ಬುಧವಾರ ಕೂಡಾ ಭೂ ಕಬಳಿಕೆ ಆರೋಪ ಹೊತ್ತಿರುವ ಡಿಎಂಕೆ ಸಂಸದರೊಬ್ಬರನ್ನು ಬಂಧಿಸಲಾಗಿದೆ. id="toptextpromo">ಕಂಚೀಪುರಂ
ಜಿಲ್ಲೆಯ ಪಪ್ಪನ್ಗುಡಿ ಗ್ರಾಮದಲ್ಲಿ ಸಂಸದ ಡಿಎಂಕೆ ಜೆಕೆ ರಿತೀಶ್ ಕುಮಾರ್ ವಿರುದ್ಧ ದೂರು ದಾಖಲಾಗಿತ್ತು. ರಾಮನಾಥಪುರಂ ಸಂಸದ ರಿತೀಶ್ ಅಕ್ರಮವಾಗಿ ಭೂ ಕಬಳಿಸಿ 1.47 ಕೋಟಿ ರೂ.ಗೂ ಅಧಿಕ ಮೊತ್ತದ ಅಕ್ರಮ ಎಸೆಗಿದ್ದರು. ಈ ಅಕ್ರಮಕ್ಕೆ ಸರಿಯಾದ ಸಾಕ್ಷಿ ಸಿಕ್ಕಿರುವುದರಿಂದ ತನಿಖೆಗಾಗಿ ಸಂಸದ ರಿತೀಶ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಭ್ರಷ್ಟ
ಡಿಎಂಕೆ ಶಾಸಕ, ಸಂಸದರ ಮೇಲೆ ಕಣ್ಣಿಟ್ಟಿರುವ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಸರ್ಕಾರ, ಡಿಎಂಕೆ ನಾಯಕರನ್ನು ಜೈಲಿಗೆ ತಳ್ಳುತ್ತಿದೆ. ಸಂಸದ ರಿತೀಶ್ ಬಂಧನಕ್ಕೆ ಪ್ರತಿಕ್ರಿಯಿಸಿರುವ ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ, ಇದೊಂದು ರಾಜಕೀಯ ದ್ವೇಷದಿಂದ ಕೂಡಿದ ಕ್ರಮ, ನಾನಿದನ್ನು ಖಂಡಿಸುತ್ತೇನೆ ಎಂದಿದ್ದಾರೆ.











Click it and Unblock the Notifications