ಯಡಿಯೂರಪ್ಪ ಜಾಮೀನು ಅರ್ಜಿ, ಬುಧವಾರ ( ನ 16) ತೀರ್ಪು

3 ಹಾಗೂ 4 ನೇ ದೂರಿಗೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. ನಿರೀಕ್ಷಣಾ ಜಾಮೀನು ಅರ್ಜಿ ವಿರುದ್ಧ ಸಿರಾಜಿನ್ ಬಾಷಾ ಪರ ವಕೀಲರು ಆಕ್ಷೇಪಣೆಗಳನ್ನು ಸಲ್ಲಿಸದ ಕಾರಣ ವಿಚಾರಣೆಯನ್ನು ಮುಂದುವರೆಸುವಂತೆ ನ್ಯಾಯಮೂರ್ತಿ ಬಿವಿ ಪಿಂಟೋ ಅವರು ಸೂಚಿಸಿದ್ದಾರೆ.
ಬಾಷಾ ಸಲ್ಲಿಸಿದ್ದ 1,4 ಹಾಗೂ 5 ನೇ ದೂರಿಗೆ ಸಂಬಂಧಿಸಿದಂತೆ ಮಂಗಳವಾರ ಬಹುತೇಕ ವಿಚಾರಣೆ ಮುಗಿದಿದ್ದು, ಆದೇಶ ನೀಡಲು ಕೋರ್ಟ್ ಸಮಯ ಸಾಲದಿದ್ದರಿಂದ ಬುಧವಾರಕ್ಕೆ ಮುಂದೂಡಲಾಗಿದೆ.
ರಾಜ್ಯ ಪ್ರವಾಸದಲ್ಲಿರುವ ಯಡಿಯೂರಪ್ಪ ಅವರು ಕೋರ್ಟ್ ಕಲಾಪದ ಸವಿವರಗಳನ್ನು ಕೇಳಿ ತಿಳಿದು ಕೊಂಡಿದ್ದು, ಬುಧವಾರ ದಿನ ಶುದ್ಧಿಯ ಬಗ್ಗೆ ತಮ್ಮ ಜ್ಯೋತಿಷಿಗಳಲ್ಲಿ ವಿಚಾರಿಸಿದ್ದಾರೆ ಎನ್ನಲಾಗಿದೆ. ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡರೆ ಯಡಿಯೂರಪ್ಪ ಅವರು ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಬೇಕಾಗುತ್ತದೆ.












Click it and Unblock the Notifications