ಧರ್ಮಾಧಿಕಾರಿಗಳಿಗೆ ಸಂದ ಇನ್ನೊಂದು ಗೌರವ
ನವದೆಹಲಿ,
ನ 15: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಗೆ ಸೀತಾರಾಮ್ ಜಿಂದಾಲ್ ಫೌಂಡೇಶನ್ ಪ್ರತಿಷ್ಟಾನ ಜಿಂದಾಲ್ ಪಶಸ್ತಿ ನೀಡಿ ಗೌರವಿಸಲಿದೆ. ರಾಷ್ಟ್ರ ಮಟ್ಟದ ಔಷಧರಹಿತ ಚಿಕಿತ್ಸಾ ವಿಧಾನಕ್ಕೆ ಪ್ರೋತ್ಸಾಹ ಹಾಗೂ ಅನುಷ್ಠಾನಕ್ಕಾಗಿ ನೀಡುವ ಪ್ರಶಸ್ತಿಗೆ ಹೆಗ್ಗಡೆಯವರ ಹೆಸರು ಅಂತಿಮಗೊಳಿಸಿದ್ದು ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ. id="toptextpromo">ಜಿಂದಾಲ್
ಫೌಂಡೇಶನ್ ಒಟ್ಟು ಐದು ವಿಭಾಗಗಳಿಗೆ ಪ್ರಶಸ್ತಿ ನೀಡುತ್ತಿದೆ. ಗ್ರಾಮಾಭಿವೃದ್ದಿ, ಔಷಧರಹಿತ ಚಿಕಿತ್ಸೆ, ಶಾಂತಿ ಸೌಹಾರ್ದತೆ, ವಿಜ್ಞಾನ ಮತ್ತು ಶಿಕ್ಷಣ ವಿಭಾಗ. ಆಯ್ಕೆ ಸಮಿತಿ ಎಲ್ಲಾ ಐದು ವಿಭಾಗಗಳಿಗೆ ಹೆಸರು ಅಂತಿಮ ಗೊಳಿಸಿದ್ದು ನವದೆಹಲಿಯಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. id='are-slot-1' class='oiad oi-axt oiadv'> id='top-searched-articles'>ಧಾರ್ಮಿಕ,
ಸಾಮಾಜಿಕ, ಶೈಕ್ಷಣಿಕ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಡಾ. ಹೆಗ್ಗಡೆಯವರಿಗೆ ಔಷಧರಹಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಧಾನ, ಕ್ಷೇತ್ರದಲ್ಲಿನ ಸಾಧನೆಗಾಗಿ ಈ ಬಾರಿ ಜಿಂದಾಲ್ ಪ್ರತಿಷ್ಟಾನ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಡಾ. ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನೆಗಳು.











Click it and Unblock the Notifications