ಎಷ್ಟು ‘ಮಾಮೂಲು’ ಬರ್ತಿತ್ತು ಹೆಗ್ಡೆಜೀ?: ರೇಣುಕಾಚಾರ್ಯ ಪ್ರಶ್ನೆ
ಮೈಸೂರು,
ನ.14: ಲೋಕಾಯುಕ್ತ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದ ಮಧುಕರಶೆಟ್ಟಿ ನೀಡಿರುವ ಹೇಳಿಕೆಯ ಕುರಿತು ಮಾಜಿ ಲೋಕಾಯುಕ್ತ ಸಂತೋಷ ಹೆಗ್ಡೆ ಸ್ಪಷ್ಟನೆ ನೀಡಿ ತಮ್ಮ ಅವಧಿಯಲ್ಲಿ ಏನು ನಡೆಯುತ್ತಿತ್ತು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಅಬಕಾರಿ ಸಚಿವ ರೇಣುಕಾಚಾರ್ಯ ಅಗ್ರಹಿಸಿದ್ದಾರೆ. id="toptextpromo">ನ್ಯಾ.
ಸಂತೋಷ ಹೆಗ್ಡೆ ಲೋಕಾಯುಕ್ತರಾಗಿದ್ದ ಅವಧಿಯಲ್ಲಿಯೇ ಆ ಸಂಸ್ಥೆಯಲ್ಲಿ ಮಿತಿ ಮೀರಿದ ಭ್ರಷ್ಟಾಚಾರ ಇತ್ತು. ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಗೆ ವಿವಿಧ ಇಲಾಖೆಗಳಿಂದ 'ಮಾಮೂಲು" ಬರುತ್ತಿತ್ತು ಎಂದು ಪೊಲೀಸ್ ಅಧಿಕಾರಿ ಮಧುಕರ ಶೆಟ್ಟಿ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಹಾಗಾದರೆ
ಲೋಕಾಯುಕ್ತರಿಗೂ (ನ್ಯಾ. ಸಂತೋಷ ಹೆಗ್ಡೆ) ಎಷ್ಟು ಬರುತ್ತಿತ್ತು ಎಂಬುದನ್ನು ಖುದ್ದು ನ್ಯಾ ಹೆಗ್ಡೆಯವರೇ ಬಹಿರಂಗಪಡಿಸಬೇಕು ಎಂದು ಸಚಿವ ರೇಣುಕಾಚಾರ್ಯ ಒತ್ತಾಯಿಸಿದ್ದಾರೆ. ಜತೆಗೆ, ನ್ಯಾ. ಹೆಗ್ಡೆ ಅವರು ಲೋಕಾಯುಕ್ತದಲ್ಲೇ ಇದ್ದ ಭ್ರಷ್ಟರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದರು ಎಂಬುದೂ ಬಹಿರಂಗವಾಗಬೇಕು ಎಂದು ಅವರು ಆಶಿಸಿದ್ದಾರೆ.











Click it and Unblock the Notifications