ಯಡಿಯೂರಪ್ಪ ಚೆಕ್ ಇಸ್ಕೊಂಡ್ರೆ ಭ್ರಷ್ಟಾಚಾರ ಹೇಗೆ?: ಸಚಿವ ರೇಣು ಮುಗ್ಧ ಪ್ರಶ್ನೆ

can-accepting-cheque-be-bribe-renukacharya
ಮೈಸೂರು, ನ.15: ಲೋಕಾ ಸಮಸ್ತ ಸರಿಯಿಲ್ಲ ಎಂದು ಲೋಕಾಯುಕ್ತದಲ್ಲಿ ಎಸ್ಪಿಯಾಗಿದ್ದವರೊಬ್ಬರು ಅಮೆರಿಕದಿಂದ ಫರ್ಮಾನು ಹೊರಡಿಸಿರುವುದು ಯಡ್ಡಿ ಪಾಳಯಕ್ಕೆ ಭೀಮ ಬಲ ಬಂದಂತಾಗಿದೆ. ಮಾಜಿ ಲೋಕಾಯುಕ್ತ ಹೆಗ್ಡೆ ಮೇಲೆ ಗೂಬೆ ಕೂರಿಸಲು ನಾಮುಂದು ತಾಮುಂದು ಎಂದು ಹಾರಾಡುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಬಲಗೈ ಬಂಟ ಅಬಕಾರಿ ಸಚಿವ ರೇಣುಕಾಚಾರ್ಯ 'ಚೆಕ್ ಇಸ್ಕೊಂಡ್ರೆ ಭ್ರಷ್ಟಾಚಾರ ಹೇಗೆ?" ಎಂದು ಸುದ್ದಿಗಾರರನ್ನೇ ಪ್ರಶ್ನಿಸಿ, ಯಡ್ಡಿ ಸಮರ್ಥನೆಗೆ ಕೈಹಾಕಿದ್ದಾರೆ.

'ಚೆಕ್ ಇಸ್ಕೊಂಡು ಭ್ರಷ್ಟಾಚಾರ ಮಾಡೋಕೆ ಅವರೇನು ದಡ್ಡರೇ. ಅವರಿಗೆ ಅಷ್ಟೂ ಗೊತ್ತಾಗಲ್ವಾ? ದಾನಿಗಳು ಹಣವನ್ನು ಶಿಕ್ಷಣ ಸಂಸ್ಥೆಗೆ ದಾನ ಮಾಡಿದ್ರೆ ಅದನ್ನೇ ಭ್ರಷ್ಟಾಚಾರ ಎಂದರೆ ಏನು ಮಾಡೋದು?' ಎಂದು ಅಮಾಯಕವಾಗಿ ಪ್ರಶ್ನೆ ಕೇಳಿದ್ದಾರೆ.

ಈಗ ಜನ ದಡ್ಡರಲ್ಲ್ಲ... ಯಡಿಯೂರಪ್ಪನವರು ಭ್ರಷ್ಟಾಚಾರ ಮಾಡಬೇಕೂ ಎಂದರೆ 100 ಕೋಟಿ ರೂ. ಕೇಳಿದ್ರೂ ಕೊಡ್ತಾ ಇದ್ದರು. ಆದರೆ, ಅವರಿಗೆ ಆ ಹಣ ಬೇಡವಾಗಿತ್ತು. ಅದಕ್ಕಾಗಿಯೇ ಪಾರದರ್ಶಕವಾಗಿ ತಮ್ಮ ಕುಟುಂಬದ ಶಿಕ್ಷಣ ಸಂಸ್ಥೆಗೆ ದೇಣಿಗೆ ತಗೊಂಡ್ರು ಎಂದು ಚುಂಬನಾಚಾರ್ಯರು ಓತಪ್ರೋತವಾಗಿ ಮಾತನಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+