2 ದಿನದಲ್ಲಿ ಎಚ್ಡಿಕೆ ವಿರುದ್ದ ದಾಖಲೆ ಬಿಡುಗಡೆ, ಯಡ್ಡಿ

ಇನ್ನು ಮುಂದೆ ದಾಖಲೆ ಸಮೇತ ಮಾತನಾಡುತ್ತೇನೆ. ಮಾಧ್ಯಮದ ಮುಂದೆ ದಾಖಲೆ ಪ್ರಸ್ತುತ ಪಡಿಸುತ್ತೇನೆ, ಇದಾದ ನಂತರ ರಾಜ್ಯದ ಜನತೆ ಈ ಬಗ್ಗೆ ತೀರ್ಮಾನ ತೆಗೆದು ಕೊಳ್ಳಲಿ. ರಾಜ್ಯದಲ್ಲಿ ಸೇಡಿನ ರಾಜಕಾರಣ ನಡೆಯುತ್ತಿದೆ ಎನ್ನುದನ್ನು ನಾನು ಒಪ್ಪಿಕೊಳ್ಳುತ್ತೇನೆ. ನಾನು ಮತ್ತೆ ಮತ್ತೆ ಹೇಳುತ್ತೇನೆ, ನಾನೇನೂ ತಪ್ಪು ಮಾಡಿಲ್ಲ. ರಾಜಕೀಯ ದ್ವೇಷಕ್ಕೆ ನಾನು ಬಲಿಯಾದೆ, ದೇವರು ದೊಡ್ಡವನು ಜೈಲಿನಿಂದ ಬಿಡುಗಡೆಯಾದೆ ಎಂದು ಯೆಡಿಯೂರಪ್ಪ ವಿಷಾದ ವ್ಯಕ್ತ ಪಡಿಸಿದ್ದಾರೆ.
ಈ ಯಡಿಯೂರಪ್ಪ ಸುಮ್ಮಿರುವವನಲ್ಲ. ಮುಂದಿನ ದಿನದಲ್ಲಿ ನೋಡುತ್ತಿರಿ. ನನ್ನ ವಿರುದ್ದ ಯಾರು ಕತ್ತಿ ಮೆಸೆದಿದ್ದಾರೋ ಅವರು ನಮ್ಮ ಪಕ್ಷದಲ್ಲೇ ಇರಲಿ ಎಲ್ಲೇ ಇರಲಿ ನಾನು ಸುಮ್ಮನೆ ಬಿಡುವುದಿಲ್ಲ. ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದ ನಂತರ ಬಹಳ ನೋವು ಅನುಭವಿಸಿದ್ದೇನೆ. ವಿನಾ ಕಾರಣ ನನ್ನ ಮೇಲೆ ಆಪಾದನೆ ಬಂತು, ಇರಲಿ ಎಲ್ಲದಕ್ಕೂ ಕಾಲ ಉತ್ತರ ನೀಡುತ್ತೆ ಎಂದು ಯಡ್ಡಿ ತನ್ನ ವಿರೋಧಿ ಪಾಳಯಕ್ಕೆ ಟಾಂಗ್ ನೀಡಿದ್ದಾರೆ.
ಬಳ್ಳಾರಿ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳ ಬೇಕೇ ಬೇಡವೇ ಎಂದು 17ನೇ ತಾರೀಕಿನ ಒಳಗೆ ನಿರ್ಧಾರ ಮಾಡುತ್ತೇನೆ. ಬಿಜೆಪಿ ಅಭ್ಯರ್ಥಿ ಗಾದಿ ಲಿಂಗಪ್ಪ ಅವರ ಗೆಲುವಿಗಾಗಿ ಶ್ರಮಿಸುವ ಆಸಕ್ತಿ ಹೊಂದಿದ್ದೇನೆ. ಅವರಿಗೆ ನನ್ನ ಸಂಪೂರ್ಣ ಬೆಂಬಲವಿದೆ, ಬಿಜೆಪಿ ಈಗ ಒಡೆದ ಪಕ್ಷ ಎನ್ನುವ ತಪ್ಪು ಕಲ್ಪನೆ ಬೇಡ ಎಂದು ಯಡ್ಡಿ ಸಮಜಾಯಿಷಿ ನೀಡಿದ್ದಾರೆ.











Click it and Unblock the Notifications