ಇಡೀ ಸರಕಾರ ಬಂದರೂ ನನ್ನ ಸೋಲಿಸಕ್ಕಾಗೊಲ್ಲ: ಶ್ರೀರಾಮನ ಸರಕಾರಿ ಸವಾಲ್
ಬಳ್ಳಾರಿ,
ನ. 15: ಬಳ್ಳಾರಿ ಉಪ ಚುನಾವಣೆಗಾಗಿ ಬಿಜೆಪಿಗೆ ಸಡ್ಡು ಹೊಡೆದು ಪಕ್ಷೇತರನಾಗಿ ಸ್ಪರ್ಧೆಗಿಳಿದಿರುವ ಶ್ರೀರಾಮುಲು, ಭರ್ಜರಿ ಸರಕಾರಿ ಸವಾಲ್ ಹಾಕಿದ್ದಾರೆ. ಅವರಿವರೇಕೆ? ಇಡೀ ಸರಕಾರವೇ ಪ್ರಚಾರ ನಡೆಸಿದರೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಅದಮ್ಯ ಗೆಲುವಿನ ವಿಶ್ವಾ ವ್ಯಕ್ತಪಡಿಸಿದ್ದಾರೆ. id="toptextpromo">ಬಿಜೆಪಿ
ಸರಕಾರದಲ್ಲಿ ಅಧಿಕಾರಕ್ಕೆ ಆಸೆ ಪಟ್ಟವ ನಾನಲ್ಲ. ಆದರೂ ನಮ್ಮನ್ನು ಬಿಜೆಪಿ ಅಸ್ಪಶ್ಯರಂತೆ ಕಂಡಿದೆ. ನಾನು ಯಾರನ್ನೂ ವೈಯಕ್ತಿಕವಾಗಿ ಟೀಕಿಸುವುದಿಲ್ಲ, ಆರೋಪಿಸುವುದೂ ಇಲ್ಲ ಎಂದ ಶ್ರೀರಾಮುಲು, ಮುಖ್ಯಮಂತ್ರಿ ಸದಾನಂದಗೌಡ ಸೇರಿ ದಂತೆ ಇಡೀ ಸರಕಾರವೇ ಬಳ್ಳಾರಿಗೆ ಬಂದರೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದರು. id='are-slot-1' class='oiad oi-axt oiadv'> id='top-searched-articles'>ಆದರೆ
ಈಗ ಬಿಜೆಪಿ ನಾಯಕರು ತನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ನಾಯಕರ ಸುಳ್ಳು ಮಾತನ್ನು ಬಳ್ಳಾರಿ ಜನ ನಂಬಲ್ಲ ಎಂದರು. ಬಿಜೆಪಿ ಸರಕಾರದ ವಿರುದ್ಧ ಹರಿಹಾಯ್ದ ಶ್ರೀರಾಮುಲು, ಬಿಜೆಪಿ ಅಭ್ಯರ್ಥಿಯನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸುವ ಮೂಲಕ ಸರಕಾರಕ್ಕೆ ಪ್ರತ್ಯುತ್ತರ ನೀಡುತ್ತೇನೆ ಎಂದರು. ಈ ಸಂದರ್ಭದಲ್ಲಿ ಶ್ರೀರಾಮುಲು ರೊಂದಿಗೆ ಸಂಸದೆ ಜೆ.ಶಾಂತಾ ಹಾಗೂ ಸಣ್ಣ ಫಕೀರಪ್ಪ ಹಾಜರಿದ್ದರು.











Click it and Unblock the Notifications