ಈ ಶಾಲೆಯಲ್ಲಿ ಚಾಚಾ ನೆಹರೂಗೆ ಕಡೆಯ ವಂದನೆ!

ಕಳೆದ ವಾರ ಯಾದಗಿರಿ ಜಿಲ್ಲೆಯ 72 ಮಕ್ಕಳಿರುವ ಒಂದು ಕೋಣೆಯ ಸರಕಾರಿ ಶಾಲೆ ಇದ್ದೂ ಸತ್ತಂತಿದ್ದರೆ, ಹಾಸನ ಜಿಲ್ಲೆಯ ಈ ಶಾಲೆ ಮಕ್ಕಳಿದ್ದರೂ ಅವರಿಗೆ ಇಲ್ಲದಂತಾಗುತ್ತಿದೆ. ನಮ್ಮ ಶಿಕ್ಷಣ ವ್ಯವಸ್ಥೆ ಎತ್ತ ಸಾಗುತ್ತಿದೆ ಎಂಬುದಕ್ಕೆ ಈ ಎರಡು ಕಥೆಗಳೇ ಸಾಕು. ಈ ಹಳ್ಳಿಯ ಮಕ್ಕಳು ಚಾಚಾ ನೆಹರೂಗೆ ಶಾಲೆಯಲ್ಲಿ ಕಡೆಯ ಬಾರಿ ವಂದನೆ ಸಲ್ಲಿಸಲಿದ್ದಾರೆ.
ಚಟ್ಟನಹಳ್ಳಿಯ ಶಾಲೆಯನ್ನು ಹಳ್ಳಿಯಿಂದ 2 ಕಿ.ಮೀ. ದೂರದಲ್ಲಿ ಅನತಿ ಎಂಬ ಊರಲ್ಲಿರುವ ಸರಕಾರಿ ಹೈಯರ್ ಪ್ರೈಮರಿ ಶಾಲೆಯೊಡನೆ ಕೂಡಿಸಲಾಗುತ್ತಿದ್ದು, ಈ ಆರು ಮಕ್ಕಳು ಇನ್ನು ಆ ಶಾಲೆಗೇ ಹೋಗಬೇಕು. ಆದರೆ, ಆ ಮಕ್ಕಳ ಪಾಲಕರು ಅವರನ್ನು ಅಲ್ಲಿ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ, ಇನ್ನೂ ಅವರಿಗೆ ಹೊಲಗದ್ದೆ ಕೆಲಸವೇ ಗತಿ.
ಕೇವಲ 150 ಜನರಿರುವ ಗ್ರಾಮದಲ್ಲಿ 35 ಹಿಂದುಳಿದ ಕುಟುಂಬದವರು ವಾಸವಿದ್ದಾರೆ. ಕಳೆದ ವಾರ ಚಟ್ಟನಹಳ್ಳಿ ಶಾಲೆಯಲ್ಲಿ 9 ಮಕ್ಕಳಿದ್ದರು, ಈ ವರ್ಷ 6 ಮಕ್ಕಳಿದ್ದಾರೆ. ಇರುವುದು ಒಂದೇ ಕೊಣೆ, ಒಬ್ಬರೇ ಶಿಕ್ಷಕರು, ಇರುವುದು ಒಂದರಿಂದ ಐದನೇ ತರಗತಿಯವರೆಗೆ. ಈ ಲೆಕ್ಕ ಎಲ್ಲ ತಗೊಂಡು ಏನಾಗಬೇಕಾಗಿದೆ. ನಾಳೆಯಿಂದ ಶಾಲೆಯೂ ಇಲ್ಲ, ಮಕ್ಕಳೂ ಮನೆಗೆ.












Click it and Unblock the Notifications