ಅಪ್ರಾಪ್ತೆ ಬಟ್ಟೆ ಕಳಚಿದ ಆರಕ್ಷಕರಿಗೂ ರಕ್ಷಣೆ

Sex Abuse minor stripped, Bhopal
ಭೋಪಾಲ್, ನ.14: ಅಪ್ರಾಪ್ತೆಯೊಬ್ಬಳನ್ನ ಠಾಣೆಗೆ ಕರೆದುಕೊಂಡು ಬಂದು ವಿವಸ್ತ್ರಗೊಳಿಸಿ, ಕಿರುಕುಳ ನೀಡಿದ ಘಟನೆ ಬೆಟುಲ್ ಜಿಲ್ಲೆಯಲ್ಲಿ ನಡೆದಿದೆ. ಈ ಘೋರ ದೃಶ್ಯವನ್ನು ಆಕೆಯ ಕುಟುಂಬದವರು ಕಂಡು ದಂಗಾಗಿದ್ದಾರೆ.

ಜಿಲ್ಲೆಯ ಹಲವು ಠಾಣೆಗಳಿಗೆ ತಿರುಗಿ ಪೊಲೀಸರ ರಾಕ್ಷಸಿ ಪ್ರವೃತ್ತಿಯ ವಿರುದ್ಧ ದೂರು ನೀಡಲು ಮುಂದಾದ ಕುಟುಂಬಕ್ಕೆ ಯಾವುದೇ ನ್ಯಾಯ ಸಿಕ್ಕಿಲ್ಲ. ಕೊನೆ ಪ್ರಯತ್ನ ಎಂಬಂತೆ ಮಾಧ್ಯಮಗಳ ಮುಂದೆ ತಮ್ಮ ಗೋಳಿನ ಕಥೆಯನ್ನು ಹೇಳಿಕೊಂಡಿದ್ದಾರೆ.

ಆದರೆ, ಈ ಕುಟುಂಬದ ಕಥೆಯನ್ನು ಅಲ್ಲಗೆಳೆದಿರುವ ಜಿಲ್ಲಾ ಎಸ್ ಪಿ ಬಿಎಸ್ ಚೌಹನ್, ಆಧಾರ ರಹಿತ ದೂರನ್ನು ನಂಬುವ ಮೊದಲು, ಆ ಕುಟುಂಬದ ಹಿನ್ನೆಲೆಯನ್ನು ಒಮ್ಮೆ ಅಧ್ಯಯನ ಮಾಡುವುದು ಒಳ್ಳೆಯದು.

ಆ ಹುಡುಗಿಯ ಅಪ್ಪ ದೊಡ್ಡ ಕ್ರಿಮಿನಲ್ ಆಗಿದ್ದಾನೆ. ಒಂದು ಡಜನ್ ಕ್ರಿಮಿನಲ್ ಕೇಸ್ ಅವನ ಮೇಲಿದೆ. ಇಡೀ ಕುಟುಂಬ ಅನೇಕ ದುಷ್ಕೃತ್ಯದಲ್ಲಿ ತೊಡಗಿರುವ ಬಗ್ಗೆ ಸಂಶಯವಿದೆ. ಪೊಲೀಸ್ ತನಿಖೆ ತಪ್ಪಿಸಿಕೊಳ್ಳಲು ಈ ರೀತಿ ನಾಟಕ ಆಡುತ್ತಿದ್ದಾರೆ ಎಂದಿದ್ದಾರೆ.

ನಡೆದಿದ್ದೇನು?: ಒಂದು ದಿನ ಮನೆಗೆ ನುಗ್ಗಿದ 10 ಜನ ಪೊಲೀಸರು ಮನೆಯಲ್ಲಿದ್ದ ನಂತರ ಪೊಲೀಸ್ ಠಾಣೆಗೆ ನ್ಯಾಯ ಕೇಳಲು ಹೋದ ಅಮ್ಮ ಮಕ್ಕಳನ್ನು ಕೆಟ್ಟದಾಗಿ ನಡೆಸಿಕೊಂಡ ಪೊಲೀಸರು ಹುಡುಗಿಯ ಬಟ್ಟೆ ಬಿಚ್ಚಿ ಅವಮಾನ ಮಾಡಿ ಕಳಿಸಿದ್ದಾರೆ. 10 ಸಾವಿರ ರೂ ದುಡ್ಡೂ ಕೊಡುವಂತೆ ಪೀಡಿಸಿ, ಸಂಜೆ ವೇಳೆಗೆ ಠಾಣೆಯಿಂದ ಹೊರ ಬಿಟ್ಟಿದ್ದಾರೆ.

ಸ್ಥಳಯ ಪೊಲೀಸ್ ಠಾಣೆಗಳಲ್ಲಿ ಈ ಬಗ್ಗೆ ದೂರು ತೆಗೆದುಕೊಳ್ಳದ ಕಾರಣ ಎಸ್ ಸಿ ಹಾಗೂ ಎಸ್ ಟಿ ಪೊಲೀಸ್ ಠಾಣೆಗೆ ಕಾಲಿಟ್ಟರೆ ಅಲ್ಲೂ ಕೂಡಾ ದೂರನ್ನು ಸ್ವೀಕರಿಸಿಲ್ಲ.

ಗೃಹ ಸಚಿವರ ಕಚೇರಿಗೆ ದೂರಿನ ಪ್ರತಿ ಕಳಿಸಲಾಗಿದೆ. ಕುಟುಂಬದ ಸಂಬಂಧಿಕರೊಬ್ಬರು ಮಧ್ಯಪ್ರದೇಶದ ಹೈ ಕೋರ್ಟಿಗೆ ಪ್ರಕರಣವನ್ನು ಎಳೆಯುವ ಮಾತಾಡುತ್ತಿದ್ದಾರೆ.

ಪೊಲೀಸ್ ಕ್ರಮಕ್ಕೆ ಕಾರಣ ಏನು? : ಸಂಜೆ ವೇಳೆ ಉರುವಲು ತರಲು ಹೋಗಿದ್ದ ಹುಡುಗಿಯ ಮೇಲೆ ಸಿವಿಲ್ ಡ್ರೆಸ್ ನಲ್ಲಿದ್ದ ಪೊಲೀಸ್ ಕೈ ಹಾಕಿದ್ದಾನೆ. ಇದಕ್ಕೆ ಹುಡುಗಿಯ ಅಣ್ಣ ವಿರೋಧಿಸಿ ಕೈ ಮಾಡಿದ್ದಾನೆ. ಈ ರಾದ್ಧಾಂತದ ನಂತರ ಪೊಲೀಸ್ ಠಾಣೆ ಪ್ರಸಂಗ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+