ಪ್ರಧಾನಿ ಮನಮೋಹನ್ ಸಿಂಗ್ ಪದಚ್ಯುತಿ ಸನ್ನಿಹಿತ

ರಾಹುಲ್ ಗಾಂಧಿ ಪ್ರಧಾನಿ ಹುದ್ದೆ ಅಲಂಕರಿಸುವ ಬಗ್ಗೆ ವರದಿಗಳು ಕಾಲಕಾಲಕ್ಕೆ ಪುಂಖಾನುಪುಂಖವಾಗಿ ಬರುತ್ತಿವೆಯಾದರೂ ಈ ಬಾರಿಯ ವಿಶೇಷವೆಂದರೆ, ರಾಹುಲ್‌ಗೆ ಆಪ್ತರಾಗಿರುವ ವಿಶ್ಲೇಷಕ ಅಮಿತಾಭ್ ದುಬೆಯವರೇ ಈ ಮಾಹಿತಿ ರವಾನಿಸಿದ್ದಾರೆ. ಸೋನಿಯಾ ಗಾಂಧಿ ಕುಟುಂಬದ ಮಿತ್ರರಾಗಿರುವ ಸುಮನ್‌ರ ಪುತ್ರ ಅಮಿತಾಭ್ ದುಬೆ.
ಈ ವರದಿ ಮೂರು ಆಯಾಮಗಳ ಬಗ್ಗೆ ಬೆಳಕು ಚೆಲ್ಲಿದೆ. ಒಂದು ಮನಮೋಹನ್ ಸಿಂಗ್ ನಿರ್ಗಮಿಸಿ ರಾಹುಲ್ ಗಾಂಧಿ ಅಥವಾ ದಲಿತ ನಾಯಕರೊಬ್ಬರು ಪ್ರಧಾನಮಂತ್ರಿಯಾಗುತ್ತಾರೆ. ಎರಡು ನಿರ್ಣಾಯಕ ನಿರ್ಧಾರಗಳನ್ನು ಕೈಗೊಳ್ಳದಿರುವ ಪರಿಣಾಮವಾಗಿ ಭಾರತದಲ್ಲಿ ಆರ್ಥಿಕ ಅಸ್ಥಿರತೆಯಿದೆ. ಮೂರನೆಯದಾಗಿ ಭಾರತೀಯ ಹೂಡಿಕೆದಾರರೂ ದೇಶದ ಆರ್ಥಿಕತೆ ಅಸ್ಥಿರವಾಗುತ್ತಿರುವ ಕುರಿತು ಮಾತನಾಡುತ್ತಿದ್ದಾರೆ.
ರಾಹುಲ್ ಗಾಂಧಿ ಸಹ ಪ್ರಧಾನಿಯಾಗುವ ಪೂರ್ವ ತಯಾರಿಯಲ್ಲಿ ತೊಡಗಿದ್ದಾರೆ. ಸೊನಿಯಾ ಗಾಂಧಿ ಕರೆಯುವ ಪ್ರಮುಖ ಸಭೆಗಳಿಗೆ ಅವರು ಕಡ್ಡಾಯವಾಗಿ ಹಾಜರಾಗುತ್ತಿದ್ದಾರೆ. ಅಲ್ಲದೆ ಮುಂದಿನ ವರ್ಷ ಉತ್ತರಪ್ರದೇಶದಲ್ಲಿ ನಡೆಯುವ ವಿಧಾನಸಭೆ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲೂ ರಾಹುಲ್ ಗಾಂಧಿ ಮುಖ್ಯ ಪಾತ್ರ ವಹಿಸುವ ನಿರೀಕ್ಷೆಯಿದೆ.












Click it and Unblock the Notifications