ಯಾತ್ರೆ ನಂತರ ಬಸವನಗುಡಿಯಲ್ಲಿ ಯಡ್ಡಿ ಶಕ್ತಿ ಪ್ರದರ್ಶನ

ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದು ಕರ್ನಾಟಕ ಪ್ರವಾಸ ಆರಂಭಿಸಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪ್ರವಾಸ ಮುಗಿದ ನಂತರ ಬೃಹತ್ ಸಮಾವೇಶ ಆಯೋಜಿಸಲಾಗುವುದು ಎಂದು ಬಿಎಸ್ ವೈ ಅಭಿಮಾನಿಗಳ ಸಂಘ ಹೇಳಿದೆ.
ನ.20 ರಂದು ಯಡಿಯೂರಪ್ಪ ಅವರ ಶಕ್ತಿ ಪ್ರದರ್ಶನಕ್ಕೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನ ವೇದಿಕೆ ಒದಗಿಸಲಿದೆ. ಬಿಜೆಪಿಯ ಎಲ್ಲಾ ವರಿಷ್ಠರಿಗೂ ಈ ಕಾರ್ಯಕ್ರಮದ ಆಹ್ವಾನ ಕಳಿಸಲಾಗುವುದು. ಸುಮಾರು 2 ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆಯಿದೆ.
ಜೈಲಿನಿಂದ ಹೊರಬಂದ ಜನನಾಯಕನನ್ನು ಅಭಿನಂದಿಸಲು ಈ ವೇದಿಕೆಯನ್ನು ಬಳಸಲಾಗುವುದು ಎಂದು ಬಿಎಸ್ ವೈ ಅಭಿಮಾನಿಗಳ ಸಂಘ ಹೇಳಿದೆ.ಆದರೆ, ಬಿಎಸ್ ಯಡಿಯೂರಪ್ಪ ಅವರ ಶಕ್ತಿ ಪ್ರದರ್ಶನ ಮೂಲಕ ಬಿಜೆಪಿ ಆಂತರಿಕೆ ಬಿಕ್ಕಟ್ಟು ಇನ್ನಷ್ಟು ಹೆಚ್ಚಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ.












Click it and Unblock the Notifications