ಬಳ್ಳಾರಿ ಶಾಸಕರ ಸಾಮೂಹಿಕ ರಾಜೀನಾಮೆ ತಡೆದ ಶ್ರೀರಾಮುಲು

B Sreeramulu
ಬಳ್ಳಾರಿ, ನ.10: ಬಳ್ಳಾರಿ ಗ್ರಾಮೀಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಶ್ರೀರಾಮುಲು ಸ್ಪರ್ಧೆ ಬಗ್ಗೆ ಘೋಷಣೆಯಾದ ಮೇಲೆ ಮತ್ತೊಮ್ಮೆ ಬಿಜೆಪಿ ಪ್ರತಿಷ್ಠೆಗೆ ಭಾರಿ ಪೆಟ್ಟು ಬಿದ್ದಿದೆ.

ರೆಡ್ಡಿ ಬಳಗ ಮತ್ತೊಮ್ಮೆ ತಮ್ಮ ಶಕ್ತಿ ಸಾಮರ್ಥ್ಯ ತೋರಲು ಮುಂದಾಗಿದೆ. ಈ ನಡುವೆ ಆತುರಾತುರದಲ್ಲಿ ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದ ಜನಪ್ರತಿನಿಧಿಗಳಿಗೆ ಶ್ರೀರಾಮುಲು ಕಿವಿಮಾತು ಹೇಳಿ ಸುಮ್ಮನಾಗಿಸಿದ್ದಾರೆ.

ನನ್ನ ಮೇಲಿನ ಅಭಿಮಾನದಿಂದ ಸಂಸದೆ ಶಾಂತಾ, ರಾಯಚೂರು ಸಂಸದ ಸಣ್ಣಫ‌ಕ್ಕೀರಪ್ಪ, ಶಾಸಕ ಸೋಮಶೇಖರ ರೆಡ್ಡಿ, ನಾಗೇಂದ್ರ, ಸುರೇಶ್‌ ಬಾಬು, ನೇಮರಾಜ್‌ ನಾಯ್ಕ, ಚಂದ್ರನಾಯ್ಕ, ಸೋಮಲಿಂಗಪ್ಪ ಮತ್ತು ಇತರ ಜನಪ್ರತಿಧಿಗಳು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ, ಇದನ್ನು ತಡೆದು ಅವರನ್ನು ಸಮಾಧಾನ ಮಾಡಿದ್ದೇನೆ.

ಜನರು ನನ್ನ ಬಳಿ ಇರುವ ತನಕ ಯಾವ ಪ್ರತಿಸ್ಪರ್ಧಿಗೂ ನಾನು ಹೆದರುವುದಿಲ್ಲ. ರೆಡ್ಡಿ ಬಳಗಕ್ಕೆ ಸೂಕ್ತ ಪ್ರಾತಿನಿಧ್ಯ ನೀಡದ ಬಿಜೆಪಿಗೆ ಕಷ್ಟಕಾಲ ಆರಂಭವಾಗಿದೆ.

ಜನತಾ ನ್ಯಾಯಾಲಯದ ಮೂಲಕ ನ್ಯಾಯ ಪಡೆಯಲು ಬಯಸಿದ್ದೇನೆ. ಜನರು ನನ್ನ ಕೈ ಬಿಡುವುದಿಲ್ಲ ಎಂದು ಬಳ್ಳಾರಿ ಗ್ರಾಮೀಣ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲು ಅವರು ಹೇಳಿದರು.

ಮಾಜಿ ಸಚಿವ ಕರುಣಾಕರ ರೆಡ್ಡಿ, ಶಾಸಕರಾದ ಆನಂದ ಸಿಂಗ್‌, ಸೋಮಲಿಂಗಪ್ಪ, ಚಂದ್ರ ನಾಯ್ಕ, ನೇಮಿರಾಜ ನಾಯಕ್‌ ಸೇರಿದಂತೆ ಬಳ್ಳಾರಿಯ ಸಮಸ್ತ ಬಿಜೆಪಿ ಪ್ರತಿನಿಧಿಗಳು ಶ್ರೀರಾಮುಲು ಬೆನ್ನ ಹಿಂದೆ ನಿಂತಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+