ಬೆಂಗಳೂರು ಒನ್ ಸೇವೆಗಳೆಲ್ಲ ಮೊಬೈಲಲ್ಲಿ!

ನಾಗರಿಕ ಸೇವಾ ಕೇಂದ್ರ ಬೆಂಗಳೂರು ಒನ್‌ನಲ್ಲಿ ಲಭ್ಯವಿರುವ ಎಲ್ಲ ಸೇವೆಗಳು ಇನ್ನು ಮುಂದೆ ಮೊಬೈಲ್‌ನಲ್ಲಿಯೇ ಲಭ್ಯವಾಗಲಿವೆ. ಮೊಬೈಲ್ ಫೋನ್ ಆಧಾರಿತ ಅಪ್ಲಿಕೇಷನ್ ಮುಖಾಂತರ ಹಣ ಪಾವತಿಸುವ ಕರಡು ನೀತಿಯನ್ನು ರಾಜ್ಯ ಸರಕಾರ ರೂಪಿಸುತ್ತಿದೆ. ಇದು ಜಾರಿಗೆ ಬಂದರೆ ಕುಳಿತಲ್ಲಿಯೇ ಎಲ್ಲ ವ್ಯವಹಾರಗಳನ್ನು ನಡೆಸಬಹುದು.
ಬೆಂಗಳೂರಿನಲ್ಲಿರುವ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕರಾಗಿರುವ ಎಸ್ ಸಡಗೋಪನ್ ನೇತೃತ್ವದ ತಜ್ಞರ ತಂಡ ಕರಡು ನೀತಿಯನ್ನು ಅಂತಿಮಗೊಳಿಸಿದರೆ ರಾಜ್ಯ ಸಂಪುಟದ ಒಪ್ಪಿಗೆಗೆ ನೀಡಲಾಗುವುದು ಎಂದು ಕರ್ನಾಟಕ ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಹಾಗು ಇ-ಆಡಳಿತ ಕಾರ್ಯದರ್ಶಿ ಎಮ್ಎನ್ ವಿದ್ಯಾಶಂಕರ್ ಅವರು ತಿಳಿಸಿದರು.
ಈ ಯೋಜನೆ ಬೆಂಗಳೂರಿಗರಿಗೆ ವರದಾನವಾಗಿ ಲಭಿಸಲಿದೆ. ಬೆಂಗಳೂರು ಒನ್ ಅಥವಾ ಇನ್ನಿತರ ಸೇವೆಗಳ ಮೇಲೆ ಅವಲಂಬಿತವಾಗುವುದು ಇದು ತಪ್ಪಿಸಲಿದೆ. ಹೆಚ್ಚಾಗಿ, ಜನರ ಅಮೂಲ್ಯವಾದ ಸಮಯವನ್ನು ಉಳಿಸಲಿದೆ. ಆದರೆ, ಈ ಯೋಜನೆ ಯಾವಾಗ ಅನುಷ್ಠಾನಕ್ಕೆ ಬರಲಿದೆ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ.












Click it and Unblock the Notifications