ಈಶ್ವರಪ್ಪನ ಸೀಟು ಬೇಡ, ಹೊಸ ಪಕ್ಷ ಇಲ್ಲ: ಯಡಿಯೂರಪ್ಪ

Yeddyurappa
ಬೆಂಗಳೂರು, ನ.9: ಜೈಲುಹಕ್ಕಿಯಾಗಿದ್ದ ಯಡಿಯೂರಪ್ಪ ತಮ್ಮ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವತ್ತ ಹೆಜ್ಜೆ ಹಾಕಿದ್ದಾರೆ. ರೇಣುಕಾಚಾರ್ಯರ ಆಗ್ರಹದ ಆಸೆಗೆ ಯಡಿಯೂರಪ್ಪ ತಣ್ಣೀರೆರಚಿದ್ದಾರೆ. ಪಕ್ಷಾಧ್ಯಕ್ಷ ಈಶ್ವರಪ್ಪನ ಸೀಟು ಬೇಡ ಎಂದು ಹೇಳಿದ್ದಾರೆ.

ಜೈಲಿನಿಂದ ಹೊರಬಿದ್ದ ಮೇಲೆ ನಿಗದಿಯಂತೆ ರೇಸ್ ಕೋರ್ಸ್ ರಸ್ತೆ ನಿವಾಸದಲ್ಲಿ ಬೆಂಬಲಿಗರೊಂದಿಗೆ ಸಣ್ಣ ಸಭೆ ನಡೆಸಿದ್ದಾರೆ. ಬುಧವಾರ ದೆಹಲಿಯಿಂದ ಬೆಂಗಳೂರಿಗೆ ಬಂದ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರನ್ನು ಭೇಟಿ ಮಾಡಿ ಅವರಿಗೆ ಶುಭ ಹಾರೈಸಿ ಕಳಿಸಿದ್ದಾರೆ.

ನಂತರ ಬೆಂಬಲಿಗರೊಂದಿಗೆ ಸಿದ್ಧಗಂಗಾ ಮಠಕ್ಕೆ ತೆರಳಿ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಪಡೆದ ಯಡಿಯೂರಪ್ಪ ಅವರು ರಾಜ್ಯದ ಉದ್ದಗಲಕ್ಕೂ ಪ್ರವಾಸ ಹೊರಟಿದ್ದಾರೆ.

ಹೊಸ ಪಕ್ಷ ಇಲ್ಲ: 'ನಾನು ಹೊಸ ಪಕ್ಷ ಕಟ್ಟುತ್ತಿಲ್ಲ ಅಥವಾ ರಾಜ್ಯಾಧ್ಯಕ್ಷರ ಹುದ್ದೆ ಆಕಾಂಕ್ಷಿಯಾಗಿಲ್ಲ. ಪಕ್ಷ ಸಂಘಟನೆ ನನ್ನ ಗುರಿ. ಜೈಲಿನಲ್ಲಿ ಸಾಕಷ್ಟು ಚಿಂತನೆ ನಡೆಸಿದ್ದೇನೆ ಅದನ್ನು ಕಾರ್ಯಗತ ಮಾಡಬೇಕು. ರಾಜ್ಯದ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಕೈಗೊಂಡ ಯೋಜನೆಗಳಿಗೆ ಕಲ್ಲು ಹಾಕಿದವರಿಗೆ ಇನ್ನು ಉಳಿಗಾಲವಿಲ್ಲ' ಎಂದು ಯಡಿಯೂರಪ್ಪ ಗುಡುಗಿದರು.

ಆದರೆ, ಬಳ್ಳಾರಿ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲು ವಿರುದ್ಧ ನಿಲ್ಲುವ ಬಿಜೆಪಿ ಅಭ್ಯರ್ಥಿಯನ್ನು ಯಡಿಯೂರಪ್ಪ ಬೆಂಬಲಿಸುತ್ತಾರಾ? ಅಥವಾ ತಟಸ್ಥವಾಗಿ ಉಳಿದು ಬಿಜೆಪಿ vs ರೆಡ್ಡಿ ಬಣದ ಯುದ್ಧ ನೋಡುತ್ತಾ ಮಜಾ ತೆಗೆದುಕೊಳ್ಳುತ್ತಾರಾ? ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+