ರಾಜ್ಯಾಧ್ಯಕ್ಷ ಕಿರೀಟ ಯಡ್ಡಿಗೆ ಕೊಡಿ: ರೇಣುಕಾಚಾರ್ಯ

Yeddyurappa and Eshwarappa
ಬೆಂಗಳೂರು, ನ.9: ಮಾಜಿ ಮುಖ್ಯಮಂತ್ರಿ ಜನನಾಯಕ ಬಿಎಸ್ ಯಡಿಯೂರಪ್ಪ ಅವರನ್ನು ಅನ್ಯಾಯವಾಗಿ ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸಿದ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಪಟ್ಟ ನೀಡಿ ಎಂದು ಅಬಕಾರಿ ಸಚಿವ ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

ಸುಮಾರು 40 ವರ್ಷಗಳಿಂದ ಪಕ್ಷದ ಸಂಘಟನೆಗೆ ದುಡಿದಿದ್ದಾರೆ. ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಅವರೇ ಕಾರಣ. ಅಸೆಂಬ್ಲಿ ಇರಬಹುದು, ಪಾಲಿಕೆ ಇರಬಹುದು ಎಲ್ಲಾ ಬಗೆಯ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲು ಯಡಿಯೂರಪ್ಪ ಅವರೇ ಕಾರಣ ಎನ್ನುವುದನ್ನು ಮರೆಯುವಂತಿಲ್ಲ.

ಯಡಿಯೂರಪ್ಪ ಅವರ ವಿರುದ್ಧ ಸಂಚು ಮಾಡಲಾಗಿದೆ. ಅವರು ಎಲ್ಲಾ ಆರೋಪಗಳಿಂದ ಮುಕ್ತರಾಗಿ ಹೊರಬರುತ್ತಾರೆ. ಅವರನ್ನು ಜೈಲಿಗೆ ಕಳಿಸಿದವರಿಗೆ ತಕ್ಕ ಶಾಸ್ತಿಯಾಗಲಿದೆ ಎಂದು ರೇಣುಕಾಚಾರ್ಯ ಅವರು ಹೇಳಿದರು.

ಆದರೆ, ಈಶ್ವರಪ್ಪ ಅವರ ಹೆಸರೆತ್ತದೆ ಮಾರ್ಮಿಕ ಉತ್ತರ ನೀಡಿದರು. ಆದರೆ, ಯಡಿಯೂರಪ್ಪ ಅವರ ಮೊದಲ ಟಾರ್ಗೆಟ್ ಈಶ್ವರಪ್ಪ ಎಂಬುದು ಅವರ ಮಾತಿನಿಂದ ಸ್ಪಷ್ಟವಾಗುತ್ತಿತ್ತು.

ಶಿಷ್ಯನ ಮಾತಿಗೆ ಯಡಿಯೂರಪ್ಪ ಉಲ್ಟಾ ಹೊಡೆದರೆ..?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+