ನ10 ರಿಂದ ರಾಜ್ಯಾದ್ಯಂತ RSS ಪ್ರತಿಭಟನೆ

RSS protest
ಬೆಂಗಳೂರು, ನ 9: ಯುಪಿಎ ಸರಕಾರ ಮುಂದಿನ ಸಂಸತ್ ಅಧಿವೇಶನದಲ್ಲಿ ಮಂಡಿಸಲು ಚಿಂತಿಸಿರುವ "ಮತೀಯ ನಿರ್ದೇಶಿತ ಹಿಂಸಾಚಾರ ತಡೆ" ಮಸೂದೆ ಹಿಂದೂ ವಿರೋಧಿಯಾಗಿದ್ದು, ಮಸೂದೆ ವಿರುದ್ದ ನವೆಂಬರ್ 10 ರಿಂದ ಕರ್ನಾಟಕ ರಾಜ್ಯಾದ್ಯಂತ ಪ್ರತಿಭಟನಾ ಅಭಿಯಾನ ನಡೆಸಲು ಆರ್ ಎಸ್ ಎಸ್ ಸೇರಿದಂತೆ ಹಲವು ಹಿಂದೂ ಪರ ಸಂಘಟನೆಗಳು ನಿರ್ಧರಿಸಿವೆ.

ರಾಷ್ಟ್ರೀಯ ಸಲಹಾ ಸಮಿತಿ ಈ ಮಸೂದೆಯನ್ನು ಸಿದ್ದಪಡಿಸಿದೆ. ಈ ಸಮಿತಿಯ ಅಧ್ಯಕ್ಷೆ ಸೋನಿಯಾ ಗಾಂಧಿ. ಸಯ್ಯದ್ ಶಹಾಬುದ್ದೀನ್, ತೀಸ್ತಾ ಸೆಟಲ್ ವಾಡ್, ಫರಾ ನಖ್ವಿ, ಜಾನ್ ದಯಾಳ್, ಅಸ್ಘರ್ ಆಲಿ ಮುಂತಾದವರು ಸಮಿತಿಯ ಸದಸ್ಯರು. ಚುನಾವಣಾ ರಾಜಕೀಯ, ಅಲ್ಪಸಂಖ್ಯಾತರಿಗೆ ಬೆಣ್ಣೆ ಹಚ್ಚಿ ವೋಟ್ ಬ್ಯಾಂಕ್ ಪಡೆಯುವ ದೃಷ್ಟಿಯಿಂದ ಕೇಂದ್ರ ಸರಕಾರ ಈ ಮಸೂದೆ ತರಲು ಪ್ರಯತ್ನ ನಡೆಸಿದೆ ಎಂದು ಸಂಘಟನೆಗಳು ದೂರಿವೆ.

ಈ ಮಸೂದೆ ಸಾಚಾರ್ ಮತ್ತು ರಂಗನಾಥ ಮಿಶ್ರಾ ಆಯೋಗದ ಮುಂದುವರಿದ ಭಾಗ. ಈ ಶಾಸನವನ್ನು ಜಾರಿಗೆ ತರಲು ಒಂದು ವಿಶೇಷ ಪ್ರಾಧಿಕಾರ ರಚಿಸಲಾಗುತ್ತದೆ. ಸದಸ್ಯ ಮಂಡಳಿಯಲ್ಲಿ ಇರುವ ಏಳು ಜನ ಸದಸ್ಯರುಗಳ ಪೈಕಿ ನಾಲ್ಕು ಜನ ಅಲ್ಪಸಂಖ್ಯಾತರು. ಸಮಿತಿಯಲ್ಲಿ ಒಬ್ಬನೇ ಒಬ್ಬ ಹಿಂದೂ ಇಲ್ಲ ಎಂದು ಸಂಘಟನೆಗಳು ಕಿಡಿಕಾರಿವೆ.

ಈ ಮಸೂದೆಯ ಪ್ರಕಾರ ಇನ್ನು ಮುಂದೆ ಯಾವುದೇ ಸಂದರ್ಭದಲ್ಲಿ ಹಿಂದುಗಳಿಗೆ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾದಲ್ಲಿ ಅದು ಮತೀಯ ಗಲಭೆ ಆಗುವುದಿಲ್ಲ. ಅಲ್ಪ ಸಂಖ್ಯಾತರಿಗೆ ಹಾನಿ ಆದಲ್ಲಿ ಮಾತ್ರ ಅದನ್ನು ಮತೀಯ ಗಲಭೆ ಎಂದು ಪರಿಗಣಿಸಲಾಗುವುದು. 'ಅಲ್ಪ ಸಂಖ್ಯಾತರಿಗೆ' ನೋವಾಗಿದೆ ಎಂದು ಕೇಂದ್ರ ಸರಕಾರ ರಾಜ್ಯ ಸರಕಾರವನ್ನು ವಜಾ ಕೂಡ ಮಾಡಬಹದು. ಇವೇ ಮುಂತಾದ ಸಲಹೆಗಳ ವಿರುದ್ದ ಹಿಂದೂಗಳು ಸಿಡಿದೇಳಬೇಕಿದೆ ಎಂದು ಸಂಘಟನೆಗಳು ಎಚ್ಚರಿಸಿವೆ.

ಹೀಗಾಗಿ ಎಲ್ಲಾ ಹಿಂದೂ ಪರ ಸಂಘಟನೆಗಳು ತಮ್ಮಲ್ಲಿರುವ ಭೇದಭಾವಗಳನ್ನು ಮರೆತು ಈ ಮಸೂದೆಯ ವಿರುದ್ದ ಒಗ್ಗೂಡಬೇಕಿದೆ. ನಾಳೆಯಿಂದ (ಗುರುವಾರ, ನ10) ನಡೆಯುವ ರಾಜ್ಯಾದ್ಯಂತ ಪ್ರತಿಭಟನೆ ಮತ್ತು ಅಭಿಯಾನಕ್ಕೆ ಎಲ್ಲರೂ ಸಹಕರಿಸ ಬೇಕೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬೆಂಗಳೂರು ಘಟಕ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಕರೆ ಕೊಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+