ಕರ್ನಾಟಕ ಕಾಂಗ್ರೆಸ್ ಆಸ್ಪತ್ರೆಗೆ ಡಾ.ಕೃಷ್ಣ ನೇಮಕ?

S M Krishna
ಬೆಂಗಳೂರು, ನ. 8 : ತಮ್ಮ ಮುಖ್ಯಮಂತ್ರಿ ಅಧಿಕಾರದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಉಚ್ಛ್ರಾಯ ಸ್ಥಿತಿಗೆ ಮುಟ್ಟಿಸಿದ್ದ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಅವರ ತುರ್ತು ಅವಶ್ಯಕತೆ ರಾಜ್ಯ ಕಾಂಗ್ರೆಸ್ ಗೆ ಇದೀಗ ಬಂದಿದೆಯೇ?

ತೀವ್ರ ನಿಗಾ ಘಟಕದಲ್ಲಿರುವ ಪಕ್ಷವನ್ನು ಕಡೆಯಪಕ್ಷ ಜನರಲ್ ವಾರ್ಡ್ ಗೆ ಸ್ಥಳಾಂತರಿಸ ಬೇಕಾದರೆ ಅದು ಎಸ್ ಎಮ್ ಕೃಷ್ಣ ಅವರಿಂದ ಮಾತ್ರ ಸಾಧ್ಯ ಎನ್ನುವ ವಿಶ್ವಾಸ ರಾಜ್ಯದ ಬಹುಪಾಲು ಕಾಂಗ್ರೆಸ್ ಮುಖಂಡರಲ್ಲಿ ಕಾಣಬರುತ್ತಿದೆ.

ಇದಕ್ಕೆ ಪೂರಕವಾಗಿ ಭಾನುವಾರ (ನ 6) ದಂದು ನಡೆದ ಪಕ್ಷದ ಚಿಂತನಾಸಭೆಯಲ್ಲಿ ಎಸ್ ಎಂ ಕೃಷ್ಣ ಅವರಿಂದ ಹೊರಬಿದ್ದ ಹೇಳಿಕೆ " ಹೈಕಮಾಂಡ್ ನೀಡುವ ಯಾವುದೇ ಜವಾಬ್ದಾರಿಗೆ ನಾನು ಸಿದ್ದ. ರಾಜ್ಯದಲ್ಲಿ ಪಕ್ಷ ಸಂಘಟನೆ, ಬಲವರ್ಧನೆಗೆ ಸೋನಿಯಾ ಮೇಡಂ ಅವರ ನಿರ್ಣಯ ಅಂತಿಮ. ರಾಷ್ಟ್ರ ರಾಜಕಾರಣದಲ್ಲಿ ಬ್ಯೂಸಿ ಆಗಿದ್ದರಿಂದ, ಇಲ್ಲಿನ ವಿದ್ಯಮಾನಗಳ ಕಡೆ ಗಮನಹರಿಸಲಾಗಲಿಲ್ಲ. ಇನ್ನು ಮುಂದೆ ಪಕ್ಷ ಬಲವರ್ಧನೆಗೆ ನನ್ನ ಸಮಯವನ್ನು ಮೀಸಲಿಡುತ್ತೇನೆ. ರಾಜ್ಯದಲ್ಲಿ ಪಕ್ಷ ಮತ್ತೆ ತನ್ನ ಭದ್ರ ನೆಲೆ ಹೊಂದಲು ಶ್ರಮಿಸುತ್ತೇನೆ".

ಒಂದಿಲ್ಲೊಂದು ಹಗರಣಗಳ ಸುಳಿಯಲ್ಲಿ ಸಿಲುಕಿರುವ ಆಡಳಿತಾರೂಢ ಬಿಜೆಪಿಯ ಭ್ರಷ್ಟಾಚಾರವನ್ನು ಜನತಾ ನ್ಯಾಯಾಲಯಕ್ಕೆ ಕೊಂಡೊಯ್ದು ಅದರ ಲಾಭ ಪಡೆಯಲು ಕಾಂಗ್ರೆಸ್ ವಿಫಲವಾಗುತ್ತಿರುವುದು ಸ್ಪಷ್ಟ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಗ್ರಾಮ ಪಂಚಾಯಿತಿ ಚುನಾವಣೆಯಿಂದ ಹಿಡಿದು ನಡೆದ ಯಾವುದೇ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸುವುದು ಇರಲಿ ಎಷ್ಟೋ ಬಾರಿ ಠೇವಣಿ ಕಳೆದುಕೊಂಡು ಮುಖಭಂಗ ಅನುಭವಿಸಿದೆ.

ಸಾರ್ವಜನಿಕರಲ್ಲಿ ಜೆಡಿಎಸ್ ವಿರೋಧ ಪಕ್ಷ ಎನ್ನುವ ಭಾವನೆ ಮೂಡಿ ಬರುತ್ತಿರುವ ಈ ಸಮಯದಲ್ಲಿ, ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪಕ್ಷ ಮತ್ತಷ್ಟು ಮಣ್ಣು ಮುಕ್ಕುವುದು ನಿಸ್ಸಂಶಯ ಎಂದರಿತ ಹೈಕಮಾಂಡ್ ಈ ಸಂಬಂಧ ಬಿರುಸಿನ ಚಟುವಟಿಕೆಯಲ್ಲಿ ತೊಡಗಿದೆ ಎನ್ನಲಾಗಿದೆ.

ರಾಜ್ಯ ರಾಜಕೀಯದಲ್ಲಿ ನಡೆಯುವ ಮತ್ತೊಂದು ಪ್ರಮುಖ ಅಂಶವೇನಂದರೆ 'ಜಾತಿ ಲೆಕ್ಕಾಚಾರ'. ಈ ಲೆಕ್ಕಾಚಾರದಲ್ಲಿ ಎರಡನೇ ಸ್ಥಾನ ಒಕ್ಕಲಿಗ ಸಮುದಾಯಕ್ಕೆ. ಲಿಂಗಾಯಿತ ಸಮುದಾಯದಲ್ಲಿ ಪಕ್ಷವನ್ನು ಸಂಘಟಿಸುವ ಸೂಕ್ತ ಆಯ್ಕೆ ಹೈಕಮಾಂಡ್ ಗೆ ಇಲ್ಲದಿರುವುದರಿಂದ ಒಕ್ಕಲಿಗ ಸಮುದಾಯಕ್ಕೆ ಸೇರಿದ ಎಸ್ ಎಂ ಕೃಷ್ಣ ಅವರೇ ಸೂಕ್ತ ಎನ್ನುವ ಅಂತಿಮ ನಿರ್ಧಾರಕ್ಕೆ ಸೋನಿಯಾಜಿ ಬಂದಿದ್ದಾರೆಂದು ನಂಬಲರ್ಹ ಮೂಲಗಳಿಂದ ವರದಿಯಾಗಿದೆ.

ಒಟ್ಟಿನಲ್ಲಿ ಸಂಧ್ಯಾಕಾಲದಲ್ಲಿರುವ ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಎಸ್ ಎಂ ಕೃಷ್ಣ ಪುನಃ ಟಾನಿಕ್ ನೀಡಬೇಕು ಎಂದು ಬಯಸುತ್ತಿದ್ದಾನೆ ಪಕ್ಷದ ಕಾರ್ಯಕರ್ತ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+