ಯಡಿಯೂರಪ್ಪಗೆ ಒಳ್ಳೆಯದಾಗಲಿ: ಡಿ ಕೆ ಶಿವಕುಮಾರ್

ಇದೇ ವೇಳೆ, ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ಯಡಿಯೂರಪ್ಪ ಅವರಿಗೆ ಜಾಮೀನು ಮಂಜೂರಾಡಿರುವುದನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸುವುದಾಗಿ ದೂರುದಾರರಾದ ಸಿರಾಜಿನ್ ಬಾಷಾ ಸ್ಪಷ್ಟಪಡಿಸಿದ್ದಾರೆ.
ಇನ್ನು, ಯಡಿಯೂರಪ್ಪ ಅವರ ಆಪ್ತ ಸಹಾಯಕ ಸಿದ್ಲಿಂಗಸ್ವಾಮಿ ಅವರು ತಮ್ಮ ನಾಯಕನಿಗೆ ಸ್ವಾಗತ ಕೋರಲು ಅಗ್ರಹಾರ ಜೈಲಿನತ್ತ ಓಡಿದ್ದಾರೆ. 'ಯಡಿಯೂರಪ್ಪ ನಿರಪರಾಧಿ' ಎಂದು ಮುಖ್ಯಮಂತ್ರಿ ಸದಾನಂದಗೌಡ ನವದೆಹಲಿಯಲ್ಲಿ ಪ್ರತಿಕ್ರಿಯಿಸಿದ್ದು, ದೆಹಲಿಯಿಂದ ವಾಪಸಾಗುತ್ತಿದ್ದಂತೆ ಯಡಿಯೂರಪ್ಪ ನಿವಾಸಕ್ಕೆ ತೆರಳಿ ಶುಭ ಕೋರುವೆ. ಅವರ ಮಾರ್ಗದರ್ಶನವನ್ನೂ ಪಡೆಯುವೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ನೆರೆ ಸಂತ್ರಸ್ತರ ಮಧ್ಯೆ ತಮ್ಮ ತಂದೆಯವರು ಮುಖ್ಯಮಂತ್ರಿಯಾಗಿ ದೀಪಾವಳಿ ಆಚರಿಸಿದ್ದರು. ಆದರೆ ಈ ಬಾರಿ ಕೆಲವರ ಕುತಂತ್ರದಿಂದ ದೀಪಾವಳಿ ವೇಳೆ ಜೈಲಿನಲ್ಲಿರಬೇಕಾಯಿತು. ಆದರೆ ಕೊನೆಗೂ ನ್ಯಾಯ ಸಿಕ್ಕಿದೆ. ಸಂತಸ ಹೆಚ್ಚಾಗಿದೆ' ಎಂದು ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರ ಅವರು ಹೇಳಿದ್ದಾರೆ.












Click it and Unblock the Notifications