ಬೆಂಗಳೂರಿನಲ್ಲಿ ಇಂದು ಕರವೇ ವಿಧಾನಸೌಧ ಮುತ್ತಿಗೆ
ಬೆಂಗಳೂರು,
ನ. 8 : ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರ ನಿಲ್ಲದ ಆಟಾಟೋಪಗಳನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣ ಮಂಗಳವಾರ (ನ 8) ಬೆಂಗಳೂರಿನಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ. ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಗುರಿಯಿದೆ. ಸುಮಾರು 25 ಸಾವಿರ ಕರವೇ ಕಾರ್ಯಕರ್ತರು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು ವಿಧಾನಸೌಧ ಸುತ್ತ ಮುತ್ತ ಸಂಚಾರ ವ್ಯವಸ್ಥೆಯಲ್ಲಿ ಅಸ್ತವ್ಯಸ್ಥ ಸಾಧ್ಯತೆಯೇ ಹೆಚ್ಚು. id="toptextpromo">ಮೆಜಿಸ್ಟಿಕ್
ಪ್ರದೇಶದ ಬನಪ್ಪ ಪಾರ್ಕಿನಿಂದ ( ತುಳಸಿತೋಟ) ಬೆಳಗ್ಗೆ 11 ಕ್ಕೆ ಆರಂಭವಾಗುವ ಮೆರವಣಿಗೆ ವಿಧಾನಸೌಧದವರೆಗೆ ಸಾಗಲಿದೆ. ಕನ್ನಡ ರಾಜ್ಯೋತ್ಸವದಿನದಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರು ಬೆಳಗಾವಿಯಲ್ಲಿ ಗಲಾಟೆ ಎಬ್ಬಿಸಿದ್ದಿಲ್ಲದೆ ಮೇಯರ್ ಮುಂದಾ ಬಾಳೆಕುಂದ್ರಿ ಕನ್ನಡಿಗರನ್ನು ಗೂಂಡಾಗಳು ಎಂದು ಬಣ್ಣಿಸಿದ್ದ ವಿರುದ್ಧ ಕರವೇ ಕಿಡಿಕಾರುತ್ತಿದೆ. id='are-slot-1' class='oiad oi-axt oiadv'> id='top-searched-articles'>ಕರವೇ
ಮೆರವಣಿಗೆ ಅಥವಾ ಚಳುವಳಿ ಎಂದರೆ ಸರಕಾರ ಮತ್ತು ಪೋಲೀಸ್ ಇಲಾಖೆಗೆ ಬಿಸಿ ಮುಟ್ಟುವುದು ಸಹಜ. ಹೀಗಾಗಿ ಪೋಲೀಸ್ ಈಗಾಗಲೇ ವಿಧಾನಸೌಧದ ಸುತ್ತಮುತ್ತ ಭಾರೀ ಬಂದೋಬಸ್ತ್ ನಡೆಸಿದೆ. ಈ ನಡುವೆ ನಗರದಲ್ಲಿ ಇಂದು (ನ 8) ಕರ್ನಾಟಕ ಕ್ಷತ್ರಿಯ ಮರಾಠ ಮಹಾಒಕ್ಕೂಟದ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ರಾಜ್ಯ ಕ್ಷತ್ರಿಯ ಮರಾಠ ಮುಖಂಡರ ಸಮಾವೇಶ ನಡೆಯಲಿದ್ದು, ಎಂಇಎಸ್ ಸಂಘಟನೆಯನ್ನು ಕರ್ನಾಟಕ ನಿಷೇಧಿಸಬೇಕು ಎನ್ನುವುದು ಮರಾಠಿ ಸಂಘದ ಸದಸ್ಯರು ಒಕ್ಕೂರಲಿನ ಒತ್ತಾಯ.











Click it and Unblock the Notifications