ಮದ್ವೆಗೆ ಒಲ್ಲೆ ಎಂದ ಪ್ರಿಯಕರ, ಸುಪಾರಿ ಕೊಟ್ಟಳು ರೇವತಿ

ಬೆಂಗಳೂರು ಹೊರವಲಯದ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆಯಾದ
ಯುವಕ 24 ವರ್ಷದ ಸಂದೀಪ ದೇಗುಲವೊಂದರಲ್ಲಿ ಅರ್ಚಕನಾಗಿದ್ದ. ಆತನಿಗೆ ರೇವತಿ ಎಂಬ 20 ವರ್ಷದ ಯುವತಿ ಜೊತೆ ಪ್ರೇಮಾಂಕುರವಾಗಿತ್ತು.
ಆದರೆ, ಸಂದೀಪ ಪೋಷಕರಾದ ಶೃಂಗೇರಿ ಮೂಲದ ಶಂಕರ್ ಭಟ್ ಅಲಿಯಾಸ್ ಶೃಂಗೇಶ್ವರ, ಸರೋಜಮ್ಮ ಈ ಪ್ರೇಮ ಕಥೆ ಅಂತ್ಯಗೊಳಿಸಲು ನಿರ್ಧರಿಸಿ, ಬೇರೆ ಜಾತಿ ಹುಡ್ಗಿ ಬೇಡ ಎಂದು ಬಿಟ್ಟರು.
ವಸಂತಪುರದ ನಿವಾಸಿ ರೇವತಿ ಮನೆಯಲ್ಲಿ ಬೇರೊಬ್ಬನ ಜೊತೆ ಮದುವೆ ಪ್ರಸ್ತಾಪ ನಡೆಯುತ್ತಿತ್ತು. ಈ ನಡುವೆ ಸಂದೀಪ ಮದುವೆ ಸಾಧ್ಯವಿಲ್ಲ ಎಂದಿದ್ದ.
ರಾತ್ರಿ ಬಾಗಿಲು ಬಡಿದಳು: ಇದರಿಂದ ಕೋಪಗೊಂಡ ರೇವತಿ ಇಬ್ಬರು ಯುವಕರೊಂದಿಗೆ ಭುವನೇಶ್ವರಿ ನಗರದಲ್ಲಿನ ಸಂದೀಪನ ಮನೆಗೆ ಮಧ್ಯರಾತ್ರಿ ವೇಳೆ ಬಂದು ಬಾಗಿಲು ಬಡಿದಿದ್ದಾಳೆ.
ಈ ಸಂದರ್ಭದಲ್ಲಿ ಸಂದೀಪನ ತಾಯಿ ಸರೋಜಮ್ಮ ರೇವತಿಯನ್ನು ಸಮಾಧಾನ ಪಡಿಸಲು ಯತ್ನಿಸಿದ್ದಾರೆ. ಆದರೆ, ರೇವತಿ ಜೊತೆ ಬಂದಿದ್ದವರು ಸರೋಜಮ್ಮ, ಶೃಂಗೇಶ್ವರ, ಪುತ್ರಿ ಅರ್ಚನ, ಅಳಿಯ ಅರುಣ್ ರನ್ನು ಕೆಡವಿ ಒಳಗಿದ್ದ ಸಂದೀಪನ ಕೊರಳು ಕೊಯ್ದು ಹೋಗಿದ್ದಾರೆ.
ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಹುಡುಕಾಟ ನಡೆದಿದೆ.












Click it and Unblock the Notifications