ಕೇಸು ಹಿಡಿದು ಬಂದ ಯುವತಿಯ ಕೈಹಿಡಿದ ನ್ಯಾ ಎನ್ಕೆ ಸುಧೀಂದ್ರ

ಬೂದಿಕೋಟೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಶ್ರದ್ಧಾವಂತ ಭಕ್ತರಾದ ಎನ್ಕೆ ಸುಧೀಂದ್ರರಾವ್ ತುಂಬಾ ಧಾರ್ಮಿಕರು. ಅನ್ಯಾಯ, ಆಮಿಷಗಳಿಗೆ ಬಗ್ಗದ ಸ್ವಭಾವದಿಂದ ನ್ಯಾ. ಸುಧೀಂದ್ರ ಅನೇಕ ಸಂಕಷ್ಟಗಳನ್ನು ಎದುರಿಸಿದ್ದಾರೆ.
'ಇರಬಹುದು. ಇನ್ನೊಂದು ಆರು ತಿಂಗಳಲ್ಲಿ ಈಗಿನ ಹೈ ಪ್ರೊಫೈಲ್ ಕೇಸುಗಳು ಹಳ್ಳ ಹಿಡಿಯಬಹುದು. ಆದರೆ ಕಾನೂನು ದೇವತೆಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಗುರುಮಘಾತುಕರ ಚಿಣ್ಣೆ ಒದ್ದೆ ಮಾಡಿಸಿರುವುದಲ್ಲಿ ಯಾವುದೇ ಅನುಮಾನವಿಲ್ಲ. ಅದೂ ತಮ್ಮದೇ ಜಿಲ್ಲೆಯ ಭ್ರಷ್ಟ ಜನಪ್ರತಿನಿಧಿಗಳಿಗೆ ಅವರು ಸಿಂಹಸ್ವಪ್ನರಾಗಿದ್ದಾರೆ. ಅವರ ಪ್ರಮಾಣಿಕತೆ ನಿಸ್ಪೃಹತೆಯನ್ನು ಯಾರಿಗೂ ಪ್ರಶ್ನಿಸಲಾಗದು. ಅಷ್ಟೊಂದು ಖಡಕ್ ನ್ಯಾ. ಎನ್ಕೆ ಸುಧೀಂದ್ರರಾವ್' ಎನ್ನುತ್ತಾರೆ ಮಾಜಿ ಸರಕಾರಿ ಪಿಪಿ ದೊರೆ ರಾಜು.
ರಾತ್ರೋರಾತ್ರಿ ಬೇಲ್ ಪಡೆದು ಮೆರೆದ ರಂಗೀನ್ ರಾಜಕಾರಣಿಗಳ ಇತಿಹಾಸವಿರುವ ಕನ್ನಡ ನಾಡಿಗೆ ನ್ಯಾ. ಎನ್ಕೆ ಸುಧೀಂದ್ರರಾವ್ ಅವರಂತಹ ಜಡ್ಜ್ ಅತ್ಯಗತ್ಯವಾಗಿದ್ದಾರೆ. ರಾಜ್ಯ ಹೈಕೋರ್ಟ್, ಈ ಹಿಂದೆ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದ ವ್ಯಕ್ತಿಗೆ ಕಾನೂನು ಚೌಕಟ್ಟು ಮೀರಿ ಜಾಮೀನು ದಯಪಾಲಿಸಿತ್ತು.
ಭ್ರಷ್ಟಾಚಾರ ಕೇಸುಗಳನ್ನು ಹೇಗೆ ನಿಭಾಯಿಸಬೇಕು ಎಂಬುದಕ್ಕೆ ಮೇಲ್ಪಂಕಿ ಹಾಕಿಕೊಟ್ಟಿರುವ ಸುಪ್ರೀಂಕೋರ್ಟಿನ ಮುಖ್ಯನ್ಯಾಯಮೂರ್ತಿ ಎಸ್. ಎಚ್. ಕಪಾಡಿಯಾ ಅವರಿಗೂ ಇದರ ಶ್ರೇಯಸ್ಸು ಸಲ್ಲಬೇಕಾಗುತ್ತದೆ ಎನ್ನುತ್ತಾರೆ ಅಡ್ವೊಕೇಟ್ ಜಿಆರ್ ಮೋಹನ್.












Click it and Unblock the Notifications