ಯುದ್ಧಕ್ಕೆ ಮುನ್ನವೇ ಶಸ್ತ್ರ ತ್ಯಾಗ ಮಾಡಿದ ಸಿದ್ದರಾಮಯ್ಯ!

siddaramaiah-concedes-win-to-sriramulu-bellary-bypoll
ಬೆಂಗಳೂರು, ನ. 6: ಕಾಂಗ್ರೆಸ್ ಪಕ್ಷದಲ್ಲಿ ಕಾಲಿಟ್ಟಾಗಿನಿಂದ ಹತಾಶೆಯ ಮಡುವಿನಲ್ಲಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಾಲಹರಣಕ್ಕಾಗಿ ರಾಜಕೀಯ ಮಾಡುತ್ತಿದ್ದಾರೆ ಎನಿಸುತ್ತಿದೆ. ರಾಜಕೀಯ ಕಿಚ್ಚನ್ನು ಎಂದೋ ಕಳೆದುಕೊಂಡಿರುವ ಸಿದ್ದು, ಸಾರಥಿಯಾಗಿ ತಮ್ಮ ಪಕ್ಷವನ್ನು ಮುನ್ನಡೆಸುವುದು ಹಾಗಿರಲಿ ಯುದ್ಧಕ್ಕೆ ಮುನ್ನವೇ ಶಸ್ತ್ರ ತ್ಯಾಗ ಮಾಡಿ, 'ತ್ಯಾಗರಾಜ' ಎನಿಸಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ್ ಪಾಲಿಗೆ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯೂ ಹಿಂದಿನ ಎಲ್ಲ ಚುನಾವಣೆಗಳಂತೆ ಗೋಚರಿಸತೊಡಗಿದೆ. ಮುಂದಿನ ಸಾರ್ವತ್ರಿಕ ಚುವಾಣೆಗೆ ಮುನ್ನ ಇದು ಕೊನೆಯ ಉಪಚುನಾವಣೆಯಾಗಲಿದೆ. ಇದರಲ್ಲಾದರೂ ತಮ್ಮ ತಾಕತ್ತು ಪ್ರದರ್ಶಿಸೋಣ ಎಂಬ ಗೋಜಿಗೇ ಹೋಗದೆ ಸೋಲೊಪ್ಪಿಕೊಂಡಿದ್ದಾರೆ. ಅದೂ ಇನ್ನೂ ಕಣಕ್ಕೂ ಇಳಿಯದ ಶ್ರೀರಾಮುಲು ಸ್ಪರ್ಧಿಸಿ ಗೆದ್ದು ಬಿಟ್ಟರೇ ಎಂಬ ಮಾತನ್ನು ಆಡಿದ್ದಾರೆ ಸಿದ್ದರಾಮಯ್ಯ.

ಒಂದು ವೇಳೆ ಶ್ರೀರಾಮುಲು ಗೆದ್ದು ಬಿಟ್ಟರೆ ಲೋಕಾಯುಕ್ತರ ಅಕ್ರಮ ಗಣಿ ವರದಿ ಬದಲಾಗಲ್ಲ ಎಂದು ಸಿದ್ದರಾಮಯ್ಯ ಫರ್ಮಾನು ಹೊರಡಿಸಿದ್ದಾರೆ!

ಲೋಕಾಯುಕ್ತರ ಅಕ್ರಮ ಗಣಿಗಾರಿಕೆ ವರದಿಯಲ್ಲಿ ತಮ್ಮ ಹೆಸರಿದೆ ಎಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಶ್ರೀರಾಮುಲು ಅವರದ್ದು ಮೂರ್ಖತನದ ನಿರ್ಧಾರ ಎಂದೂ ಟೀಕಿಸಿದರು. ಶ್ರೀರಾಮುಲು ಅವರು ಲೋಕಾಯುಕ್ತರ ವರದಿಯಲ್ಲಿ ಅಕ್ರಮ ಗಣಿಗಾರಿಕೆಯ ಆರೋಪಿ. ಅವರೇನಾದರೂ ಉಪಚುನಾವಣೆಯಲ್ಲಿ ಗೆಲ್ಲುವುದರಿಂದ ಅವರ ಹೆಸರನ್ನು ಕೈಬಿಡಲು ಸಾಧ್ಯವಿಲ್ಲ ಎಂದು ವ್ಯಾಖ್ಯಾನಿಸಿದ್ದಾರೆ.

ಜನರು ಐದು ವರ್ಷಗಳ ಅವಧಿಗೊಮ್ಮೆ ಶಾಸಕರನ್ನು ಚುನಾಯಿಸುತ್ತಾರೆ. ಹಣವಿರುವವರೆಲ್ಲಾ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುತ್ತೇವೆಂಬ ದುರಾಲೋಚನೆಯಿಂದಲೇ ಮರುಚುನಾವಣೆ ಸ್ಪರ್ಧಿಸುತ್ತಿರುವುದರಿಂದ ಪ್ರಜಾಪ್ರತಿನಿಧಿ ಕಾಯ್ದೆಗೆ ಬದಲಾವಣೆ ತರಬೇಕಾದದ್ದರಿಂದ ತಿದ್ದುಪಡಿ ಅಗತ್ಯವಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+