ನಮ್ಮ ಬೆಂಗಳೂರು ಪ್ರಶಸ್ತಿಗೆ ಹೆಸರನ್ನು ಸೂಚಿಸಿ

MP Rajeev Chandrshekar
ಬೆಂಗಳೂರು, ನ.2: ಸಮಾಜಕ್ಕೆ ಅಸಾಮಾನ್ಯ ಕೊಡುಗೆ ನೀಡಿ ಎಲೆ ಮರೆ ಕಾಯಿಯಂತೆ ಇರುವ ಶ್ರೀಸಾಮಾನ್ಯರನ್ನು ಗುರುತಿಸಿ ಬೆಂಬಲಿಸುವ ಉದ್ದೇಶದಿಂದ 'ನಮ್ಮ ಬೆಂಗಳೂರು ಪ್ರಶಸ್ತಿ"ಯನ್ನು ನೀಡಲಾಗುತ್ತಿದೆ. ಈ ಪ್ರಶಸ್ತಿಗಳಿಗೆ ನಾಗರಿಕರು ಸಹ ನಾಮ ನಿರ್ದೇಶನ ಮಾಡುವ ಅವಕಾಶವಿದೆ ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನದ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಬೆಂಗಳೂರಿನ ಬೆಳವಣಿಗೆಯಲ್ಲಿ ಅವಿರತವಾಗಿ ದುಡಿಯುತ್ತಿರುವ ವ್ಯಕ್ತಿ, ಸಂಘಟನೆಯನ್ನು ನಾಗರಿಕರು ಆಯ್ಕೆ ಮಾಡಬಹುದು. ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು, ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘಗಳು, ಉದ್ಯಮ ಹಾಗೂ ವ್ಯಕ್ತಿಗಳ ವಿಭಾಗದಲ್ಲಿ ನಾಮ ನಿರ್ದೇಶನ ನಡೆಯಲಿದೆ.

ಬೆಂಗಳೂರು ಒನ್ ಕೇಂದ್ರ, ಫುಡ್ ವರ್ಲ್ಡ್, ಕಪ್ಪಾ ಹಾಗೂ ಕಾಫಿ ಡೇಗಳಲ್ಲಿ ಪ್ರಶಸ್ತಿಯ ಅರ್ಜಿಯು ಲಭ್ಯವಿದ್ದು, ನಾಗರಿಕರು ತಮ್ಮ ನಾಯಕರನ್ನು ಆಯ್ಕೆ ಮಾಡಬಹುದು. 2010 ರಲ್ಲಿ ಸುಮಾರು 14,000 ನಾಮ ನಿರ್ದೇಶನಗಳನ್ನು ಸ್ವೀಕರಿಸಲಾಗಿತ್ತು.

ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಲು ತೀರ್ಪುಗಾರರ ಸಮಿತಿ ಯನ್ನು ರಚಿಸಲಾಗಿದ್ದು, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ, ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್, ಮೈಕ್ರೋಲ್ಯಾಂಡ್ ಸಂಸ್ಥೆಯ ಸ್ಥಾಪಕ ಪ್ರದೀಪ್‌ಕರ್, ನೃತ್ಯಪಟು ಸುಭಾಷಿಣಿ ವಸಂತ್, ಅಬೈಡ್ ಕಾರ್ಯಪಡೆಯ ಸದಸ್ಯ ರಾಜೇಂದ್ರ ಮಿಶ್ರಾ, ಇಂಡಿಯಾ ಟುಗೆದರ್ ಸಹ ಸಂಸ್ಥಾಪಕ ಡಾ.ಅಶ್ವಿನ್ ಮಹೇಶ್, ಕವಿ ಪ್ರೊ.ಸಿದ್ದಲಿಂಗಯ್ಯ, ಚಳವಳಿಗಾರ್ತಿ ಡಾ.ರುತ್ ಮನೋರಮಾ, ಮೇಜರ್ ಜನರಲ್ ನಂಜಪ್ಪ, ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್‌ನ ಆಡಳಿತ ಮಂಡಳಿಯ ಸದಸ್ಯ ಡಾ.ಎಚ್. ಸುದರ್ಶನ್ ಬಲ್ಲಾಳ, ಉದ್ಯಮಿ ಪೃಥ್ವಿ ಚಿಂತಪಲ್ಲಿರೆಡ್ಡಿ, ಅವಾಸ್ ಸಂಸ್ಥೆಯ ಟ್ರಸ್ಟಿ ಅನಿತಾ ರೆಡ್ಡಿ, ಪತ್ರಕರ್ತ ಎಚ್.ಎಸ್.ಬಲರಾಮ್, ಉದ್ಯಮಿ ವಿಕ್ಟೋರಿಯಾ ಡಿ"ಸೋಜಾ ತೀರ್ಪುಗಾರ ರಾಗಿ ಇರುತ್ತಾರೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+