ಕರ್ನಾಟಕ ಹೈಕೋರ್ಟ್ ನಲ್ಲಿ ಮಂಗಳವಾರ ಹೈಡ್ರಾಮಾ
ಬೆಂಗಳೂರು,
ನ. 2 : ಕರ್ನಾಟಕ ಉಚ್ಚ ನ್ಯಾಯಾಲಯ ಮಂಗಳವಾರ ಬೆಳಿಗ್ಗೆ ಅನೇಕ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಒಂದೆಡೆ ಯಡಿಯೂರಪ್ಪ ಮತ್ತು ಕೃಷ್ಣಯ್ಯ ಶೆಟ್ಟಿ ಅವರ ಜಾಮೀನು ವಿಚಾರಣೆ ನಡೆಯುತ್ತಿದ್ದರೆ, ಮತ್ತೊಂದೆಡೆ ಬಾಂಬ್ ಬೆದರಿಕೆ ಕರೆ ಬಂದಿದ್ದರಿಂದ ಎಲ್ಲ ಚಟುವಟಿಕೆಗಳು ನಿಂತ ನೀರಾಗಿದ್ದವು. id="toptextpromo">ಹೈಕೋರ್ಟಲ್ಲಿ
ಬಾಂಬ್ ಇಡಲಾಗಿದೆ ಎಂದು ಅನಾಮಿಕ ಕರೆ ಬಂದ ಹಿನ್ನೆಲೆಯಲ್ಲಿ ಪೊಲೀಸ್ ಮತ್ತು ಬಾಂಬ್ ನಿಷ್ಕ್ರಿಯ ದಳ ಕೋರ್ಟಿಗೆ ಧಾವಿಸಿ ಮೂಲೆಮೂಲೆಗಳನ್ನು ತಪಾಸಣೆ ನಡೆಸಿದರು. ಎಲ್ಲ ಸ್ಥಳಗಳನ್ನು ಹುಡುಕಲಾಯಿತಾದರೂ ಬಾಂಬ್ ಎಲ್ಲೂ ಪತ್ತೆಯಾಗಲಿಲ್ಲ. ಬಾಂಬ್ ಇಟ್ಟಿದೆಯೆಂದು ಹೇಳಿದವರು ಕೂಡ ಪತ್ತೆಯಾಗಿಲ್ಲ. id='are-slot-1' class='oiad oi-axt oiadv'> id='top-searched-articles'>ಈ
ಎಲ್ಲ ನಾಟಕ ನಡೆಯುತ್ತಿದ್ದ ಹಂತದಲ್ಲಿ ಸಂಜೀವ್ ಎಂಬವರು ಕೋರ್ಟ್ ಆವರಣದಲ್ಲಿಯೇ ಪ್ರಜ್ಞೆತಪ್ಪಿ ಬಿದ್ದ ಪ್ರಸಂಗ ನಡೆಯಿತು. ಇದರಿಂದಾಗಿ ಕೆಲಕಾಲ ಗೊಂದಲ ವಾತಾವರಣ ಸೃಷ್ಟಿಯಾಗಿತ್ತು. ಅನಾರೋಗ್ಯದಿಂದ ಬಳಲುತ್ತಿರುವ ಅವರನ್ನು ಕೂಡಲೆ ಆಂಬುಲನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ.











Click it and Unblock the Notifications