ಕನ್ನಡ ರಾಜ್ಯೋತ್ಸವ ವಿರೋಧಿಸಿ ಎಂಇಎಸ್ ಪುಂಡಾಟಿಕೆ

ಕನ್ನಡ ರಾಜ್ಯೋತ್ಸವದಂದು 'ಕರಾಳ ದಿನ' ಆಚರಿಸಬೇಕೆಂದು ಮರಾಠಿಗರಿಗೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕರೆ ನೀಡಿತ್ತು. ಈ ಕರೆಗೆ ಓಗೊಟ್ಟ ಕೆಲವರು ಪ್ರತಿಭಟನಾ ಮೆರವಣಿಗೆ ಮಾಡುತ್ತಿದ್ದಾಗ, ಕೆಲ ಮರಾಠಿಗರೇ ಅವರ ಮೇಲೆ ಕಲ್ಲು ತೂರಿದ ಘಟನೆ ಇಂದು ಬೆಳಗಾವಿಯಲ್ಲಿ ನಡೆದಿದೆ.
ಒಂದನೇ ರೈಲ್ವೆ ಗೇಟ್ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಅವರ ಮೇಲೆ ಕಲ್ಲು ತೂರಲಾಗಿದೆ. ಆ ಕಲ್ಲು ತೂರಾಟದಲ್ಲಿ ಕೆಲ ಕಾರುಗಳು ಜಖಂ ಆಗಿವೆ. ಹತ್ತಿರದ ಆಸ್ಪತ್ರೆಯ ಕಿಟಕಿಗಾಜುಗಳು ಪುಡಿಪುಡಿಯಾಗಿವೆ. ಕಲ್ಲು ತೂರಾಟದಿಂದ ಯಾರಿಗೂ ಗಾಯವಾಗಿಲ್ಲ ಎಂದು ತಿಳಿದುಬಂದಿದೆ.
ಇದಕ್ಕೆಲ್ಲ ಪ್ರೇರಣೆ ನೀಡಿದ್ದು ಬೆಳಗಾವಿ ಮೇಯರ್ ಮಂದಾ ಬಾಳೆಕುಂದ್ರಿ. ಕನ್ನಡ ವಿರೋಧಿ ಹೇಳಿಕೆ ನೀಡಿದ್ದಲ್ಲದೆ, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು. ಅಲ್ಲಿಯವರೆಗೆ ಹೋರಾಟ ನಡೆಸುವುದಾಗಿ ಹೇಳಿ ಮರಾಠಿಗರನ್ನು ದಂಗೆಯೇಳಲು ಪ್ರೇರೇಪಿಸಿದ್ದಾರೆ.












Click it and Unblock the Notifications