ದೀಪಾವಳಿಯಂದು ಕುದ್ರೋಳಿ ಬೆಳಗಲಿರುವ ವಿಧವೆಯರು

Widows to pull ratha in Kudroli, Mangalore
ಮಂಗಳೂರು, ಅ. 25 : ಪತಿಯನ್ನು ಕಳೆದುಕೊಂಡವರು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿಯ ಸಂದರ್ಭದಲ್ಲಿ ಪ್ರಸಾದ ರೂಪದಲ್ಲಿ ಸೀರೆ, ಹೂವು, ಬಳೆ, ಕುಂಕುಮ ಸ್ವೀಕರಿಸಿ ರಥ ಎಳೆದು ಸುದ್ದಿಯಾಗಿದ್ದರು. ಆಮೂಲಕ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿಯವರು ಪತಿಯನ್ನು ಕಳೆದುಕೊಂಡವರು ಅಮಂಗಳೆಯರಲ್ಲವೆಂದು ಸಮಾಜಕ್ಕೆ ಮನವರಿಕೆ ಮಾಡಿಕೊಡಲು ಯತ್ನಿಸಿದ್ದರು.

ಪತಿ ಕಳೆದುಕೊಂಡ ಪುಣ್ಯವನಿತೆಯರು ಇದೀಗ ದೀಪಾವಳಿಯ ಸಂದರ್ಭದಲ್ಲಿ ಕುದ್ರೋಳಿ ಕ್ಷೇತ್ರದಲ್ಲಿ ಚಂಡಿಕಾಯಾಗದಲ್ಲಿ ತೊಡಗಿಸಿಕೊಂಡು ಲಕ್ಷೀಪೂಜೆ, ಬೆಳ್ಳಿ ರಥೋತ್ಸವದಲ್ಲಿ ಭಾಗಿಯಾಗುವರು ಎಂದು ಜನಾರ್ಧನ ಪೂಜಾರಿ ಪ್ರಕಟಿಸಿದ್ದಾರೆ.

ಅ.26ರಂದು ಬೆಳಿಗ್ಗೆ 9 ಗಂಟೆಗೆ ಕುದ್ರೋಳೀ ಕ್ಷೇತ್ರದಲ್ಲಿ ಮತ್ತೊಂದು ಸಾಮಾಜಿಕ ಸುಧಾರಣೆಯ ಅಧ್ಯಾಯ ತೆರೆದುಕೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 1500 ವನಿತೆಯರು ಭಾಗವಹಿಸುವ ನಿರೀಕ್ಷೆಯಿದೆ. ದೀಪಾವಳಿಯಂದು, ಇದೇ ಸಾಮಾಜಿಕ ಪರಿವರ್ತನಾ ಪ್ರಕ್ರಿಯೆಯ ಎರಡನೇ ಹಂತ ನಡೆಯಲಿದೆ. ಸೀರೆ ಸಹಿತ ಸರ್ವ ಕೊಡುಗೆಗಳ ಪ್ರಸಾದ ನೀಡಲಾಗುವುದು ಎಂದು ಪೂಜಾರಿ ಪ್ರಕಟಿಸಿದ್ದಾರೆ.

'ನಾವು ಆಧುನಿಕ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಆದರೆ ಇನ್ನು ಕೂಡ ಅನೇಕ ಅಮಾನವೀಯ ಆಚರಣೆಗಳು ನಡೆಯುತ್ತಿವೆ. ಪತಿಯನ್ನು ಕಳೆದುಕೊಂಡವರ ಬಗ್ಗೆ ಸಮಾಜ ಕ್ರೂರವಾಗಿ ನಡೆದುಕೊಳ್ಳುತ್ತಿದೆ.ಈ ಸೋದರಿಯರಿಗೆ ಸಮಾಜದಲ್ಲಿ ಗೌರವಾನ್ವಿತ ಸ್ಥಾನ ದೊರೆಯಬೇಕು. ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮೀಜಿಯವರು ಸ್ಥಾಪಿಸಿದ ಕುದ್ರೋಳಿ ಕ್ಷೇತ್ರದಿಂದಲೇ ಈ ಜಾಗೃತಿಯ ಅಭಿಯಾನ ಆರಂಭವಾಗಿದೆ' ಎಂದು ಜನಾರ್ದನ ಪೂಜಾರಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+